ಗಿಣಿಗೇರಿ ಕೆರೆಗೆ ಬಾಗಿನ ಸಂಭ್ರಮ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ: ಸಮೀಪದ ಗಿಣಿಗೇರಿ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಸಡಗರ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಈ ಸಂಭ್ರಮಕ್ಕೆ 15 ವರ್ಷಗಳ ಬಳಿಕ ಕೆರೆ ತುಂಬಿ ಕೋಡಿ ಬಿದ್ದಿರುವುದರ ಜೊತೆಗೆ ಕೆರೆಗೆ ಬಾಗಿನ ಅರ್ಪಣೆ ಕಾರ್ಯಕ್ರಮ ಪ್ರಮುಖವಾಗಿತ್ತು..!

ಬುಧವಾರ ಕೆರೆಗೆ ಬಾಗಿನ ಬಿಡುವ ಕಾರ್ಯಕ್ರಮ ಹಾಗೂ ಗಂಗಾ ಪೂಜೆ ಕಾರ್ಯಕ್ರಮವನ್ನು ಗ್ರಾಮಸ್ಥರು ಏರ್ಪಡಿಸಿದ್ದರಿಂದ ಕೆರೆಯಂಗಳದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಇದರಿಂದ ಗ್ರಾಮಸ್ಥರ ಸಂತಸ ಮನೆಮಾಡಿತ್ತು.

ಕಳೆದ ಒಂದೂವರೆ ವರ್ಷದ ಹಿಂದೆ ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಕೆರೆ ಪುನಶ್ಚೇತನ ಕಾರ್ಯ ನಡೆದಿತ್ತು. ಗ್ರಾಮದ ಮುಖಂಡರು, ಯುವಕರು, ಮಹಿಳೆಯರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಇದಕ್ಕೆ ಸಹಕಾರ ಕೂಡಾ ನೀಡಿದ್ದರು.

ಇಂದಿನ ಬಾಗಿನ ಕಾರ್ಯಕ್ರಮದಲ್ಲಿ ಬಿಜಕಲ್ ಮಹಾಸ್ವಾಮೀಜಿಗಳು ಸಾನಿಧ್ಯ ವಹಿಸಿದ್ದರು. ಶಾಸಕ ರಾಘವೇಂದ್ರ ಹಿಟ್ನಾಳ್, ಬಿಜೆಪಿ ಹಿರಿಯ ಮುಖಂಡ ಹಾಗೂ ರಾಷ್ಟ್ರೀಯ ಪರಿಷತ್ತು ಸದಸ್ಯ ಸಿ.ವಿ.ಚಂದ್ರಶೇಖರ್, ಅಮರೇಶ್ ಕರಡಿ, ಡಿವೈಎಸ್ಪಿ ಶರಣಬಸಪ್ಪ ಸುಬೇದಾರ್, ಸಿಪಿಐ ವಿಶ್ವನಾಥ್ ಹಿರೇಗೌಡರ್ ಗಿಣಿಗೇರಿ ಗ್ರಾಮದ ಮುಖಂಡರಾದ ಗೂಳಪ್ಪ ಹಲಗೇರಿ, ಕರಿಯಪ್ಪ ಮೇಟಿ, ಸುಬ್ಬಣ್ಣಾಚಾರ್ ವಿದ್ಯಾನಗರ, ವೆಂಕಟೇಶ್ ಬಾರಕೇರ್, ಲಕ್ಷ್ಮಣ ಡೊಳ್ಳಿನ್, ಯಮನೂರಪ್ಪ ಕಟಗಿ, ಮೈಲಾರಪ್ಪ ಕೂಡ್ಲಿ ಎ,ವಿ, ರವಿ, ನಾಗರಾಜ್ ಚಳ್ಳೊಳ್ಳಿ, ರವಿಕುಮಾರ್ ಹಲಗೇರಿ, ಶ್ರೀನಿವಾಸ್ ಪೂಜಾರ, ಬಾಬು ಗೋಡೆಕಾರ, ಹನುಮೇಶ ನಾಯಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು..!!

ಸುದ್ದಿ ಕೃಪೆ : ಕುಬೇರ ಮಜ್ಜಿಗಿ