– ರಾಜ್ಯಮಟ್ಟಕ್ಕೆ ಆಯ್ಕೆ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ರಾಯಚೂರು : ಜಿಲ್ಲೆಯ ಸಿಂಧನೂರಿನ ಆದರ್ಶ
ವಿದ್ಯಾಲಯದ (RMSA) ಇಬ್ಬರು ಕ್ರೀಡಾಪಟುಗಳು ರಾಜ್ಯಮಟ್ಟದ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ..!

ಗುಲಬರ್ಗಾದ ಚಂದ್ರಶೇಖರ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ 14 ವರ್ಷದ ಒಳಗಿನ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಗುಲಬುರ್ಗಾ ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ದ್ವಿತೀಯ ಸ್ಥಾನ ಪಡೆದ ಅನನ್ಯ ಎಲ್.ಯು ತಂದೆ ಲಿಂಗರಾಜ್ ಹಾಗೂ ಸಾಕ್ಷಿ ಶಾಂತಮೂರ್ತಿ ಕುಂಬಾರ ಇವರಿಬ್ಬರು ರಾಜ್ಯಮಟ್ಟದ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಗುಲಬರ್ಗಾ ವಿಭಾಗವನ್ನು ಪ್ರತಿನಿಧಿಸಲಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿ ಶರಣಪ್ಪ ವಟಗಲ್, ಕ್ಷೇತ್ರ ಸಮನ್ವಯಾಧಿಕಾರಿ ಬಸವಲಿಂಗಪ್ಪ, ಅಕ್ಷರ ದಾಸೋಹ ಅಧಿಕಾರಿ ಸಾಬಣ್ಣ ವಗ್ಗರ್, ECO ಹನುಮಂತಪ್ಪ , ಹಾಗೂ ಶಾಲೆಯ ಮುಖ್ಯ ಗುರು ಜಂಬಣ್ಣ ಹಾಗೂ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೆ ಮಲ್ಲಪ್ಪ ಮತ್ತು ಸಿಬ್ಬಂದಿ ವರ್ಗ ಮತ್ತು SDMC ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಪಾಲಕರು ಮತ್ತು ಕ್ರೀಡಾಭಿಮಾನಿಗಳು ಕ್ರೀಡಾಪಟುಗಳನ್ನು ಅಭಿನಂದಿಸಿದ್ದಾರೆ..!!

One thought on “– ರಾಜ್ಯಮಟ್ಟಕ್ಕೆ ಆಯ್ಕೆ..!

Comments are closed.