ಆಪತ್ತಿನಲ್ಲಿ ‘ಪಶು’ ಸಂಪತ್ತು

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಚರ್ಮ ಗಂಟು ರೋಗದ ಅರ್ಭಟದಲ್ಲಿ ಪಶು ಸಂಪತ್ತು ಇಂದು ಆಪತ್ತಿನಲ್ಲಿದೆ..!

ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೋನಾ ಮಾಹಾಮಾರಿಯಂತೆ ಜಾನುವಾರುಗಳ ಸಾವಿನ ಸಂಖ್ಯೆ ನಿತ್ಯ ಹೆಚ್ಚಾಗುತ್ತಲೇ ಇದೆ. ಪಶು ಸಂಪತ್ತನ್ನು ನಂಬಿದ ಅದೆಷ್ಟೋ ಕುಟುಂಬಗಳು ನಿತ್ಯ ಒಂದಿಲ್ಲಾ ಒಂದು ಪಶುಗಳ ಅಂತ್ಯಕ್ರಿಯೆಯಲ್ಲಿ ತೊಡಗಿಕೊಂಡಿವೆ. ಜೋಡಿ ಎತ್ತು ಕಟ್ಟಿಕೊಂಡಿದ್ದ ರೈತ ಕುಟುಂಬ ಬದುಕುಳಿದ ಇನ್ನೊಂದು ಎತ್ತು ರಕ್ಷಣೆಗೆ ಪಶು ಆಸ್ಪತ್ರೆಗೆ ನಿತ್ಯ ಅಲೆದಾಟದಲ್ಲಿವೆ. ಪಶುಗಳನ್ನೇ ನಂಬಿದ ಕೃಷಿಕರು ಹಾಲಿನ ಆದಾಯ ಇಲ್ಲದೆ, ಡೋಲಾಯಮಾನದ ಸ್ಥಿತಿಯಲ್ಲಿವೆ. ಜೀವನೋಪಾಯಕ್ಕಾಗಿ ಪಶುಗಳನ್ನು ನಂಬಿದ ಅನ್ನದಾತ ಕುಟುಂಬ ಆಪತ್ತಿನಲ್ಲಿರುವುದು ಸತ್ಯ. ಕೊರೋನಾ ರೋಗ ನಿಯಂತ್ರಣಕ್ಕೆ ಎಚ್ಚತ್ತುಕೊಂಡ ಸರಕಾರಗಳು ಪಶು ಸಂಪತ್ತು ಉಳಿವಿಗಾಗಿ ಸಂಪೂರ್ಣ ಮೈಮರೆತಿರುವಂತಿವೆ. ಈಗಲಾದರೂ ಕಾಲ ಮಿಂಚುವ ಮೊದಲೇ ಎಚ್ಚತ್ತುಕೊಂಡು ಪಶು ಸಂಪತ್ತು ರಕ್ಷಣೆಗೆ ಮುಂದಾಗಬೇಕಾಗಿರುವುದು ಅವಶ್ಯವಿದೆ..!!

(ಮುಂದುವರೆಯಲಿದೆ…)