ಬಾಯಿಯಲ್ಲಿ ‘ಗೋ’ ಮಂತ್ರ..! ಕಾರ್ಯದಲ್ಲಿ ‘GO’ ತಂತ್ರ..!!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಗೋ ಹತ್ಯೆ ಖಂಡಿಸಿ, ಗೋವುಗಳ ರಕ್ಷಣೆ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಸರಕಾರಗಳು ತೀವ್ರ ಆಪತ್ತಿನಲ್ಲಿರುವ ಗೋವುಗಳ ರಕ್ಷಣೆಗೆ ಹಿಂದೇಟು ಹಾಕುತ್ತಿವೆ ಎಂಬ ಆರೋಪಗಳು ರೈತಾಪಿ ವಲಯದಲ್ಲಿ ಕೇಳಿ ಬರುತ್ತಿವೆ..!

ಈಗಾಗಲೇ ರಾಜ್ಯ ತುಂಬೆಲ್ಲಾ ಉಲ್ಬಣಗೊಂಡಿರುವ ಚರ್ಮ ಗಂಟು ರೋಗವು ಗೋವುಗಳ ಸಂತತಿ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ದೇಶಿ ಗೋವು ತಳಿಗಳು ಸೇರಿದಂತೆ ಕ್ರಾಸ್ ತಳಿಗಳ ಮೇಲೆ ರೋಗವು ಮರಣ ಮೃದಂಗ ಭಾರಿಸುತ್ತಿದೆ. ರೋಗ ಹರಡಿಕೊಂಡು ನಿತ್ಯ ನೂರಾರು ಜಾನುವಾರುಗಳು ಸಾವನ್ನಪ್ಪುತ್ತಿವೆ. ಆದರೆ, ರೋಗ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲವಾಗಿದೆ. ರೋಗದ ವಿರುದ್ಧ ಹೋರಾಡದಾಗದ ಪಶು ವೈದ್ಯರು ಕೈಚೆಲ್ಲಿ ಕುಳಿತಿದ್ದಾರೆ. ರೋಗ ನಿಯಂತ್ರಣಕ್ಕೆ ಮಾತ್ರ ಸರಕಾರ ಯಾವುದೇ ತರಹದ ಮುತುವರ್ಜಿ ತೆಗೆದುಕೊಳ್ಳದಿರುವುದು ವಿಪರ್ಯಾಸದ ಸಂಗತಿ. ಸದಾ ಗೋ ಹತ್ಯೆ ವಿರುದ್ಧ ಮಾತನಾಡುವವರು ಇತ್ತ ಲಕ್ಷ್ಯ ವಹಿಸಬೇಕಾಗಿರುವುದು ಬಾಕಿ ಇದೆ..!!

(ಮುಂದುವರೆಯುವುದು…)