ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳದ ಶಿಕ್ಷಕ ಎಸ್.ಬಿ.ದೊರೆಗೋಳ ಸರ್ ನಮ್ಮನ್ನ ಅಗಲಿದ್ದಾರೆ..!
ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೆ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ 9.30 ಕ್ಕೆ ಸಾವನ್ನಪ್ಪಿದ್ದಾರೆ. ಮೃತರು ಮೂಲತಃ ಗುಡ್ಡದ ದೇವಲಾಪೂರ ಗ್ರಾಮದವರು. ಈ ಸಧ್ಯ ತುಗ್ಗಲಡೋಣಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ದಾಖಲೆ ಪ್ರಕಾರ ಷಣ್ಮುಖಪ್ಪ ದೊರೆಗಲ್ ಆದ ಇವರು, ದೊರೆಗೋಳ ಸರ್ ಅಂತನೇ ಫೇಮಸ್. ಅಪಾರ ಜನ ಮೆಚ್ಚುಗೆ ಗಳಿಸಿದ್ದ ಇವರು ಸಾವಿರಾರು ಜನ ಶಿಷ್ಯ ಬಳಗ ಸೇರಿದಂತೆ ಪತ್ನಿ ಸೇರಿದಂತೆ ಓರ್ವ ಪುತ್ರನನ್ನು ಅಗಲಿದ್ದಾರೆ. ಸರಳತೆಗೆ ಹೆಸರಾದ ದೊರೆಗೋಳ ಸರ್ ಕಳೆದ 26 ವರ್ಷಗಳಿಂದ ಹನುಮನಾಳದಲ್ಲಿಯೇ ವಾಸವಾಗಿದ್ದರು..!!