ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಸರಕಾರಿ ಪದವಿ ಪೂರ್ವ ಕಾಲೇಜಿನ ಸುಸಜ್ಜಿತ ಕಂಪ್ಯೂಟರ್ ಸೇರಿದಂತೆ ವಿದ್ಯಾರ್ಥಿಗಳ ಆಸನ ಸಾಮಾಗ್ರಿಗಳನ್ನು ಪ್ರಾಚಾರ್ಯರು ಮಾರಾಟ ಮಾಡಿ ಸಿಕ್ಕಿ ಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ..!
ಗುಜರಿ ನೆಪವೊಡ್ಡಿ ಸುಸಜ್ಜಿತ ಕಂಪ್ಯೂಟರ್ ಸಾಮಾಗ್ರಿಗಳು ಸೇರಿದಂತೆ ವಿದ್ಯಾರ್ಥಿಗಳ ಆಸನಕ್ಕಿದ್ದ ಬೆಂಚಗಳು ಸೇರಿದಂತೆ ಸ್ವಲ್ಪ ಪ್ರಮಾಣದ ಗುಜರಿ ಸಾಮಾಗ್ರಿಗಳನ್ನು ಮಾರಾಟ ಮಾಡಿ ಶುಕ್ರವಾರ ಮಧ್ಯ ರಾತ್ರಿ ಸಮಯದಲ್ಲಿ ಗ್ರಾಮಸ್ಥರು ಸಾಗಾಣಿಕೆಯ ವಾಹನ ತಡೆದಾಗ ಪ್ರಕರಣ ಬೆಳಕಿಗೆ ಬಂದಿದೆ.
ವಾಹನ ಗ್ಲಾಸ್ ನುಚ್ಚು ನೂರು : ಕಾಲೇಜಿನ ಕಂಪ್ಯೂಟರ್ ಸಾಮಾಗ್ರಿಗಳು ಸೇರಿದಂತೆ ಬೆಂಚಗಳನ್ನು ಅನಧಿಕೃತವಾಗಿ ಗುಜರಿ ಹೆಸರಿನಲ್ಲಿ ಸರಬರಾಜು ಮಾಡುತ್ತಿದ್ದ ವಾಹನ ತಡೆದು, ಗ್ರಾಮದ ಯುವಕರು ಕಾಲೇಜ್ ಉಸ್ತುವಾರಿ ಸಮಿತಿ ಉಪಾಧ್ಯಕ್ಷ ಬಸವರಾಜ ನೀರಾವರಿ ಹಾಗೂ ಕೆಲ ಸದಸ್ಯರ ಗಮನಕ್ಕೆ ತಂದು ಕಾಲೇಜಿನ ಯಾವುದೇ ವಸ್ತುಗಳನ್ನು ಸರಬರಾಜು ಮಾಡದಂತೆ ಗ್ರಾಮಸ್ಥರು ವಾಹನ ಚಾಲಕನಿಗೆ ತಾಕೀತು ಮಾಡಿ, ಕಾಲೇಜ ಆವರಣದಲ್ಲಿಯೇ ವಾಹನ ನಿಲ್ಲಿಸಿದ್ದಾರೆ. ಆದರೆ, ಯಾರೋ ದುಷ್ಕರಿಮಿಗಳು ರಾತ್ರಿ ಸಮಯದಲ್ಲಿ ವಾಹನದ ಮುಂಭಾಗದ ಗ್ಲಾಸ್ ಸೇರಿದಂತೆ ಎಡ ಮತ್ತು ಬಲ ಬದಿಗಳ ಗ್ಲಾಸ್ ಗಳನ್ನು ನುಚ್ಚು ನೂರು ಮಾಡಿ ತಮ್ಮ ಆಕ್ರೋಶ ಹೊರಹಾಕಿದ ಘಟನೆ ನಡೆದಿದೆ. ಇಲಾಖೆ ಪ್ರಾಚಾರ್ಯರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
# ಕಾಲೇಜ್ ಕಂಪ್ಯೂಟರ್ ಸೇರಿದಂತೆ ಸುಸಜ್ಜಿತ ವಿದ್ಯಾರ್ಥಿಗಳ ಆಸನಗಳನ್ನು ಪ್ರಾಚಾರ್ಯರರು ಮಾರಾಟ ಮಾಡಿದ್ದಾರೆ. ನನ್ನ ಗಮನಕ್ಕೆ ಬಂದಿಲ್ಲ..!
## ಬಸವರಾಜ ನೀರಾವರಿ,
ಕಾಲೇಜ್ ಉಸ್ತುವಾರಿ ಸಮಿತಿ, ಉಪಾಧ್ಯಕ್ಷರು
ಹನುಮನಾಳ..!