ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಇಬ್ಬರು ಶಾಲಾ ಮಕ್ಕಳು ಮೃತಪಟ್ಟ ಸ್ಥಳಕ್ಕೆ ಕುಷ್ಟಗಿ ತಹಸೀಲ್ದಾರ ಎಂ. ಗುರುರಾಜ ಸೇರಿದಂತೆ ಅಧಿಕಾರಿಗಳ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿತು..!
ಪ್ರಕರಣ ಹಿನ್ನಲೆ : ದಿನಾಂಕ 24-10-2022 ರಂದು ಕುಷ್ಟಗಿ ತಾಲೂಕಿನ ಎನ್.ರಾಂಪೂರ ಗ್ರಾಮದ ಮೂರು ಜನ ಬಾಲಕರು ಶಾಲೆ ರಜೆ ಇರುವ ಕಾರಣದಿಂದ ವಕ್ಕನದುರ್ಗಾ ಗ್ರಾಮದ ರಸ್ತೆಗೆ ಕಡೆಗೆ ಸೈಕಲ್ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿ ರಸ್ತೆಗೆ ಹೊಂದಿ ಕೊಂಡಿರುವ ಸ.ನಂ 6/1 ರಲ್ಲಿ ಕೃಷಿ ಜಮೀನನ್ನು ಸಮತಟ್ಟು ಕೈಗೊಳ್ಳಲು ಮುಂದಾಗಿರುವ ಹಿನ್ನೆಲೆಯಲ್ಲಿ ಅಲ್ಲಿ ನೀರು ಸಂಗ್ರಹಿಸಲು ತೆಗ್ಗು ನಿರ್ಮಿಸಲಾಗಿತ್ತು. ಈ ತೆಗ್ಗುಗಳಲ್ಲಿ ನಿರಂತರವಾಗಿ ಸುರಿದ ಮಳೆ ಮತ್ತು ಗುಡ್ಡದ ಪ್ರದೇಶದಿಂದ ಹರಿದು ಬಂದಿರುವ ನೀರಿನಿಂದ ತೆಗ್ಗು ತುಂಬಿಕೊಂಡಿದೆ. ಇದೆ ನೀರಿನಲ್ಲಿ ಮೂರು ಜನ ಮಕ್ಕಳು ಈಜ ಕಲೆಯಲು ಹೋಗಿ ಕಾಲು ಜಾರಿ ಬಿದ್ದು, ವಿಜಯ ಮಾದರ ಹಾಗೂ ಮಹಾಂತೇಶ ಮಾದರ ಎಂಬ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಆದರೆ, ಜಮೀನು ಮಾಲಿಕ ಕೂಡಲೇ ತೆಗ್ಗು ಮುಚ್ಚಲು ಗ್ರಾಮಕ್ಕೆ ಭೇಟಿ ನೀಡಿದ ಕಂದಾಯ ಇಲಾಖೆ ಅಧಿಕಾರಿಗಳ ಸೂಚನೆಗೆ ಒಪ್ಪಿಕೊಂಡಿದ್ದಾನೆ. ಮೃತ ಕುಟುಂಬಗಳಿಗೆ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಭೇಟಿ : ತಹಸೀಲ್ದಾರ ಎಂ. ಗುರುರಾಜ, ತಾಪಂ ಇಓ ಶಿವಪ್ಪ ಸುಬೇದಾರ, ಕಂದಾಯ ನಿರೀಕ್ಷಕ ಎಂ.ಡಿ.ಮಹ್ಮದ್, ಅಕ್ಷರ ದಾಸೋಹ ಎಡಿ ಶರಣಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಜಗದೀಶ ಎಂ, ಸಿ.ಆರ್.ಪಿ ವಿಠ್ಠಲ ಪತ್ತಾರ, ಗ್ರಾಮ ಲೆಕ್ಕಾಧಿಕಾರಿ ವೀರೇಶ ಎತ್ತಿನಮನಿ, ಹೆಚ್.ಎಂ. ಶರಣಪ್ಪ ಬಡಿಗೇರ ಸೇರಿದಂತೆ ಇನ್ನಿತರ ಅಧಿಕಾರಿಗಳ ಉಪಸ್ಥಿತರಿದ್ದರು..!