ಅಪಘಾತದಲ್ಲಿ ಶಿಕ್ಷಕನ ಸಾವು

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಸಮೀಪದ ಬಿಳೇಕಲ್ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಬಸಪ್ಪ ಹಿರೇಹಾಳ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ..!

ಮೂಲತಃ ಕುಷ್ಟಗಿ ತಾಲೂಕಿನ ಬೊಮ್ಮನಾಳ ಗ್ರಾಮದವರಾದ ಶಿಕ್ಷಕ ಬಸಪ್ಪ ಹಿರೇಹಾಳ ಅವರು ಗ್ರಾಮದಿಂದ ಬಿಳೇಕಲ್ ಶಾಲೆಗೆ ಆಗಮಿಸುವ ಸಂದರ್ಭದಲ್ಲಿ ಕಾರೊಂದು ಶಿಕ್ಷಕ ಚಲಿಸುತ್ತಿದ್ದ ಮೋಟಾರು ಬೈಕ್ ನಡುವೆ ಅಪಘಾತವಾಗಿರುವುದನ್ನು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ..!!