ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಪಟ್ಟಲಚಿಂತಿ ಗ್ರಾಮದ ಶಂಕ್ರಯ್ಯ ಗಡಾದ (ಗೌರಿಮಠ) ಮಗನನ್ನು ಕೊಲ್ಲಲು ಯತ್ನಿಸಿದ ತಂದೆ..!
ತಂದೆಯ ಕೊಡಲಿ ಪೆಟ್ಟಿನಿಂದ ಮಾರಣಾಂತಿಕ ಹಲ್ಲೆಗೊಳಗಾಗಿರುವ ಮಲ್ಲಯ್ಯ ಗಡಾದ (ಗೌರಿಮಠ) (32) ತೀವ್ರ ಗಾಯಗೊಂಡು ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸಾವು ಬದುಕಿನ ಮಧ್ಯೆದಲ್ಲಿರುವ ಯುವಕನ ಹಾಗೂ ತಂದೆಯ ನಡುವೆ ಆಸ್ತಿ ವಿವಾದ ಬಹಳ ದಿನಗಳಿಂದ ವ್ಯಾಜ್ಯ ಇತ್ತು ಎಂದು ತಿಳಿದು ಬಂದಿದೆ. ಮಗನ ಕೊಲೆಗೆ ಮುಂದಾದ ತಂದೆ ಶಂಕರಯ್ಯ ಖುದ್ದು ಹನುಮಸಾಗರ ಪೊಲೀಸ್ ಠಾಣೆಗೆ ಶರಣಾಗತಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ..!!