ಕೊಪ್ಪಳಕ್ಕೆ ಎರಡು ರಾಜ್ಯೋತ್ಸವ ಪ್ರಶಸ್ತಿ ಗರಿ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಕೊಪ್ಪಳ ಜಿಲ್ಲೆಗೆ 2022 – 2023 ನೇ ಸಾಲಿಗೆ ಎರಡು ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿವೆ..!

ಚಿತ್ರಕಲೆ ವಿಭಾಗದಲ್ಲಿ ವಿಶೇಷವಾಗಿ ಅದರಲ್ಲಿ ಕೊಪ್ಪಳ ಜಿಲ್ಲೆಯ ಕಲೆಯಂತಲೇ ಖ್ಯಾತಿಯ ಕಿನ್ನಾಳ ಕಲೆಗಾರ ಸಣ್ಣರಂಗಪ್ಪ ಚಿತ್ರಗಾರ ಆಯ್ಕೆಯಾಗಿದ್ದಾರೆ. ಅದರಂತೆ ಬಯಲಾಟ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ ಶಂಕರಪ್ಪ ಮಲ್ಲಪ್ಪ ಹೊರಪೇಟೆ ಎಂಬುವರಿಗೆ ಲಭಿಸಿದೆ. ಇವರು ಕೊಪ್ಪಳ ತಾಲೂಕಿನ ಮೊರನಾಳ ಗ್ರಾಮದವರು. ಕಳೆದ 45 ವರ್ಷಗಳಿಂದ ಬಯಲಾಟ ಕಲೆಯ ಮಾಸ್ತರ್ ಆಗಿ ಸೇವೆ ಸಲ್ಲಿಸಿದ್ದು ವಿಶೇಷ.

ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ದಿನದಂದು ರಾಜ್ಯ ಸರಕಾರ ನೀಡುವ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಶಿಷ್ಟ ಸಾಧಕರನ್ನು ಗುರುತಿಸಿ ಈ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗುವುದು..!!