ಸೀಮಂತಕ್ಕೆ ಸಾಕ್ಷಿಯಾದ “ಕನ್ನಡ ಧ್ವಜ”

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ದಂಪತಿಗಳಿಬ್ಬರು ‘ಕನ್ನಡ ಧ್ವಜ’ ವಿನಿಮಯ ಮಾಡಿಕೊಂಡು ‘ಸೀಮಂತ ಕಾರಣ’ ಮಾಡಿಕೊಂಡಿರುವುದು ಈ ದಿನದ ವಿಶೇಷ..!

ಇಂತಹ ವಿಶಿಷ್ಟತೆಯಿಂದ ಕೂಡಿದ ಸಡಗರ ಸಂಭ್ರಮದ ಸೀಮಂತ ಕಾರಣದ ಜೊತೆಗೆ ‘ಕನ್ನಡ ರಾಜ್ಯೋತ್ಸವ’ ಕಾರ್ಯಕ್ರಮವು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಡೆಕೊಪ್ಪ ಗ್ರಾಮದ ಬಸವರಾಜ ಜಿಗೇರಿ ಕುಟುಂಬದಲ್ಲಿ ಜರುಗಿದೆ. ಮನೆ ಮಂದಿಗೆಲ್ಲ ಸಡಗರ ಸಂಭ್ರಮ ಮನೆಮಾಡಿತ್ತು. ತುಂಬು ಗರ್ಭಿಣಿ ಶಾಂತಾ ಹಾಗೂ ಬಸವರಾಜ ದಂಪತಿಗಳಿಬ್ಬರು ಹೊಸ ಬಟ್ಟೆ ಒಡವೆಗಳ ಅಲಂಕಾರದಲ್ಲಿ ಸೀಮಂತ ಜರುಗಿದ್ದರೇ.. ಅಷ್ಟೇನು ವಿಶೇಷತೆ ಕಂಡು ಬರುತ್ತಿದ್ದಿಲ್ಲ. ಆದರೆ, ಮನೆಗೆ ಆಗಮಿಸಿದ ನೆಂಟರು ಸೇರಿದಂತೆ ಎಲ್ಲರ ಬಾಯಿಯಲ್ಲೂ ಕನ್ನಡ ಮಾತೆ ಭುವನೇಶ್ವರಿಯ ತಾಯಿಯ ಸ್ಮರಣೆ, ಅದರಂತೆ ಎಲ್ಲರ ಕೈಯಲ್ಲೂ ಕನ್ನಡ ತಾಯಿಗೆ ಇಷ್ಟವಾದ ಕೆಂಪು ಬಿಳಿ ಬಣ್ಣದ ನಾಡ ಧ್ವಜ, ಕೊರಳಲ್ಲಿ ಕನ್ನಡದ ಶಾಲು ರಾರಾಜಿಸುತ್ತಿದ್ದವು. ಹಿಂದು ಸಂಪ್ರದಾಯದಂತೆ ಸೀಮಂತದ ಆರತಿಯೊಂದಿಗೆ ಕನ್ನಡ ನಾಡ ಧ್ವಜವನ್ನು ದಂಪತಿಗಳಿಬ್ಬರು ವಿನಿಮಯಮಾಡಿಕೊಳ್ಳುವುದರ ಮೂಲಕ ೬೭ ನೇ ಕನ್ನಡ ರಾಜ್ಯೋತ್ಸವ ಆಚರಣೆಗೆ ಇಡೀ ಕುಟುಂಬ ಮೇರಗು ತಂದಿದ್ದು ವಿಶೇಷತೆಗಳೊಲ್ಲಂದು ವಿಶೇಷವಾಗಿತ್ತು. ಕನ್ನಡ ಭಾಷೆ, ನೆಲ, ಜಲ ಮತ್ತು ಗಡಿ ಮೇಲಿಟ್ಟಿರುವ ಕುಟುಂಬದ ವಿಶೇಷ ಅಭಿಮಾನ ಕಂಡ ಕೆಲ ಕನ್ನಡ ಅಭಿಮಾನಿಗಳು ಕುಟುಂಬದ ಬಗ್ಗೆ ಹೆಮ್ಮೆವ್ಯಕ್ತಪಡಿಸಿದ್ದಾರೆ..!!