ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಜಾಗೀರಗುಡದೂರು ಗ್ರಾಮದ ಕಾರ್ಮಿಕನಿಗೆ ವಿದ್ಯುತ್ ತಂತಿ ತಾಕಿದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಜರುಗಿದೆ..!
ಪರಶುರಾಮ ಚಂದಪ್ಪ ಹರಿಜನ ಮೃತ ನತದೃಷ್ಟ ಕಾರ್ಮಿಕ. ಸ್ಥಳೀಯ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾಗ ಕಟ್ಟಡದ ಮೇಲ್ಭಾಗದಲ್ಲಿ ಹಾಯ್ದು ಹೋಗಿರುವ ತಂತಿ ತಾಕಿ ಕಾರ್ಮಿಕ ಮೃತಪಟ್ಟಿರುವ ಘಟನೆ ಜರುಗಿದೆ ಎಂದು ತಿಳಿದು ಬಂದಿದೆ..!!