ನಾಯಿ ಕಡಿತಕ್ಕೆ ಬಾಲಕ ಜಿಲ್ಲಾ ಆಸ್ಪತ್ರೆಗೆ ದಾಖಲು

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ :

ಕೊಪ್ಪಳ : ಜಿಲ್ಲೆಯ ಗಂಗಾವತಿ ತಾಲೂಕಿನ ಮುಸ್ಲಾಂಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗೌರಿಪುರ ಗ್ರಾಮದ 9 ವರ್ಷದ ಬಾಲಕನಿಗೆ ನಾಯಿ ಕಡಿದು ಗಾಯಗೊಳಿಸಿದ ಘಟನೆ ಜರುಗಿದೆ..!

ಗುನ್ನೆಪ್ಪ ತಂದೆ ಬೀರಪ್ಪ ನತದೃಷ್ಟ ಬಾಲಕ. ನಾಯಿ ಕಚ್ಚಿದ ತಕ್ಷಣವೇ ಚಿಕಿತ್ಸೆಗಾಗಿ ಮುಸ್ಲಾಂಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದ ಬಾಲಕ, ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾನೆ. ಸ್ಥಳೀಯ ಮಟ್ಟದಲ್ಲಿ ಚಿಕಿತ್ಸೆ ಲಭ್ಯವಾಗದಿರುವುದಕ್ಕೆ ಪ್ರಮುಖ ಕಾರಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಾಯಿತ ಕಡಿತಕ್ಕೆ ಸಂಬಂಧಿಸಿದ ಔಷಧದ ಕೊರತೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಇನ್ನಾದರೂ ಜಿಲ್ಲೆಯ ಎಲ್ಲಾ ಸರಕಾರಿ ಆಸ್ಪತ್ರೆಗಳಿಗೂ ಔಷಧ ಸರಬರಾಜು ಮಾಡಬೇಕಾಗಿರುವುದು ಬಾಕಿ ಇದೆ..!!