ಹಾಲಿನ ಹಣ ಹೆಚ್ಚಳಕ್ಕೆ ಹರತಾಳ

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಹಾಲಿನ ದರ ಹೆಚ್ಚಳಕ್ಕೆ ಒತ್ತಾಯಿಸಿ (ಸೋಮವಾರ) ದಿನಾಂಕ 07-11-2022 ರಂದು ಕೊಪ್ಪಳದಲ್ಲಿ ರೈತರು ಪ್ರತಿಭಟನಾ ಜಾಥಾ ಹಮ್ಮಿಕೊಂಡಿದ್ದಾರೆ..!

ಹೈನುಗಾರಿಕೆ ನೆಚ್ಚಿಕೊಂಡು ಬದುಕು ಸಾಗಿಸುತ್ತಿರುವ ರೈತರಿಗೆ ಪ್ರತಿ ಲೀಟರ್ ಹಾಲಿಗೆ 5 ರೂಪಾಯಿಗಳ ಹೆಚ್ಚಳ ಮಾಡುವಂತೆ ರಾಜ್ಯ ಸರಕಾರವನ್ನ ಹಲವು ಬಾರಿ ಈಗಾಗಲೇ ಒತ್ತಾಯಿಸಲಾಗಿದೆ. ಆದರೆ, ದರ ಹೆಚ್ಚಿಸುವಲ್ಲಿ ರಾಜ್ಯ ಸರಕಾರ ಮಾತ್ರ ಸಂಪೂರ್ಣ ವಿಫಲವಾಗಿದೆ. ಸರಕಾರದ ಈ ತಾತ್ಸಾರ ಮನೋಭಾವನೆಯನ್ನು ಖಂಡಿಸಲಾಗಿದೆ. ಹಾಲಿನ ದರವನ್ನು ಸರಕಾರ ಕೂಡಲೇ ಹೆಚ್ಚಿಸಲು ಒತ್ತಾಯಿಸಿ ಅಂದು ಕೊಪ್ಪಳ ನಗರದ ಬಸವೇಶ್ವರ (ಗಂಜ್) ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೆಳಗ್ಗೆ 11 ಗಂಟೆಗೆ ಜಾಥಾ ಕೈಗೊಳ್ಳುವ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಹೈನೋದ್ಯಮಿಗಳು ಭಾಗವಹಿಸಲು ಸಂಘಟಕರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ..!!