ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕನಕಗಿರಿ ತಾಲೂಕಾ ಕ್ಯಾರಿಹಾಳ ಗ್ರಾಮದ ಜಮೀನೊಂದರಲ್ಲಿ ನಡೆದಿರುವ ಅನಧಿಕೃತ ಮರಳು ಗಣಿಗಾರಿಕೆ ಸ್ಥಳಕ್ಕೆ ಉಪ ವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ಹಾಗೂ ಜಿಲ್ಲಾ ಗಣಿ ಮತ್ತು ಭೂವಿಜ್ಞಾನಿ ಇಲಾಖೆ ಹಿರಿಯ ಭೂವಿಜ್ಞಾನಿ ದೀಲಿಪಕುಮಾರ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ, ಜಮೀನು ಮಾಲಿಕರ ಮೇಲೆ ಪ್ರಕರಣ ದಾಖಲಿಸಿದೆ..!
ಜಿಲ್ಲೆಯ ಕನಕಗಿರಿ ತಾಲೂಕು ಕ್ಯಾರಿಹಾಳ ಗ್ರಾಮ ವ್ಯಾಪ್ತಿಯಲ್ಲಿರುವ ಸ.ನಂ 58/1, 58/2, 58/3, 58/4 ಜಮೀನುಗಳಲ್ಲಿ ಅನಧಿಕೃತ ಮರಳು ಗಣಿಗಾರಿಕೆ ಸೇರಿದಂತೆ ಅಕ್ರಮವಾಗಿ ಸಾಗಾಣಿಕೆ ಬಗ್ಗೆ ಸ್ಥಳೀಯ ಮಾಹಿತಿ ಮೇರೆಗೆ ದಿನಾಂಕ 04/11/2022 ರಂದು ಜಿಲ್ಲೆಯ ಹಿರಿಯ ಅಧಿಕಾರಿಗಳ ತಂಡ ಜಮೀನು ಮಾಲಿಕರ ಮೇಲೆ (FIR) ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ದಿನಾಂಕ 05/11/2022 ಉಪವಿಭಾಧಿಕಾರಿ, ಉಪನಿರ್ದೇಶಕರು ಗಣಿ, ತಾಲೂಕು ಮಟ್ಟದ ಕಂದಾಯ ಮತ್ತು ಗಣಿ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಸ್ಥಳ ಪರಿಶೀಲಿಸಲಾಯಿತು. ಅಧಿಕಾರಿಗಳ ಸ್ಥಳ ಪರಿಶೀಲನೆಯಿಂದ ಅಕ್ರಮ ಗಣಿಗಾರಿಕೆ ಮತ್ತು ಸಾಗಾಣಿಕೆ ಕಂಡುಬಂದಿದ್ದು ಕಟ್ಟುನಿಟ್ಟಿನ ಕ್ರಮಗಳಾದ ಜಮೀನಿನ ಪಹಣಿ ಪತ್ರಿಕೆಯಲ್ಲಿ ಅಕ್ರಮದ ಭೋಜಾ (ನಮೂದು) ದಾಖಲಿಕರಿಸುವುದು ಸೇರಿದಂತೆ ದಂಡ ವಿಧಿಸುವ ಮತ್ತು ಇತರೆ ಕಾನೂನು ವ್ಯಾಪ್ತಿಯ ಕ್ರಮಗಳ ಕುರಿತು ಸಭೆಯಲ್ಲಿ ಶಿಫಾರಸು ಕೈಗೊಳ್ಳಲಾಗಿತು. ಅಲ್ಲದೆ, ಕನಕಗಿರಿ ತಾಲೂಕು ವ್ಯಾಪ್ತಿಯ ಅಕ್ರಮ ಮರಳು ಗಣಗಾರಿಕೆಯ ಚಟುವಟಿಕೆಗಳನ್ನು ನಿಯಂತ್ರಿಸಲು ಕಂದಾಯ, ಗಣಿ, ಪೊಲೀಸ್ ಮತ್ತು ಪಂಚಾಯತ್ ರಾಜ್ಯ ಇಲಾಖೆಯ ವಿಶೇಷ ತಂಡದ ಮೂಲಕ ನಿಯಂತ್ರಿಸಲು ಕ್ರಮ ವಹಿಸಲು ಸಭೆಯಲ್ಲಿ ನಿರ್ಮಾಣಕ್ಕೆ ಬರಲಾಗಿದೆ.
ದಂಡ ವಸೂಲಿ : ಕನಕಗಿರಿ ತಾಲೂಕಾ ವ್ಯಾಪ್ತಿಯಲ್ಲಿ ಎಪ್ರಿಲ್-2022 ರಿಂದ ಇಲ್ಲಿಯವರೆಗೂ ಅನಧಿಕೃತ ಮರಳು ಗಣಿಗಾರಿಕೆ ಸೇರಿದಂತೆ ಸಾಗಾಣಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ 13,65,066=00 ರೂಪಾಯಿಗಳ ದಂಡ ವಸೂಲಾಗಿದೆ..!!