ಕುಷ್ಟಗಿಯಲ್ಲಿ ಕಳ್ಳತನ

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪಟ್ಟಣದ ಬಾರ್ ಹಾಗೂ ಕಿರಾಣಿ ಅಂಗಡಿಯಲ್ಲಿ ಕಳ್ಳತನವಾಗಿರುವ ಘಟನೆ ನಡೆದಿದೆ..!

ರವಿವಾರ ತಡರಾತ್ರಿ ವೇಳೆಗೆ ಪಟ್ಟಣದ ಬಸವರಾಜ ಚಲನಚಿತ್ರ ಬಳಿ ಇರುವ ಗೌರಾ ಬಾರ್ ಹಾಗೂ ಕಿರಾಣಿ ಅಂಗಡಿಗಳ ಶೆಟರ್ಸ ಅನ್ನು ಸರಳುಗಳಿಂದ ಮೀಟಿ ಒಳಪ್ರವೇಶಿಸಿದ ಕಳ್ಳರು ಕೆಲ ಮದ್ಯ ಬಾಟಲಿಗಳು ಸೇರಿದಂತೆ ಸಿಗರೇಟ್ ಇತ್ಯಾದಿಗಳು ಕಳ್ಳತನವಾಗಿರುವುದು ಪಕ್ಕಾ ಆಗಿದೆ. ಕಳ್ಳತನದ ಕೆಲ ದೃಶ್ಯಾವಳಿಗಳು ಸಿಸಿ ಟಿವಿಯಿಂದ ಪಕ್ಕಾ ಆಗಿವೆ. ಅಣತಿ ದೂರದಲ್ಲಿರುವ ಪೊಲೀಸ್ ಠಾಣೆಯ ಬಳಿ ಜರುಗಿರುವ ಘಟನೆಯಿಂದ ಸಾರ್ವಜನಿಕರು ಬೆಚ್ಚಿಬೆರಗಾಗಿದ್ದಾರೆ..!!