ಶಾಡಲಗೇರಿಯಲ್ಲಿ ಸಾಮೂಹಿಕ ವಿವಾಹ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಶಾಡಲಗೇರಿ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರರ ಜಾತ್ರಾ ನಿಮಿತ್ಯ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಳ್ಳಲಾಗಿದೆ..!

ದಿನಾಂಕ 12-12-2022 ರಂದು ಜರುಗುವ ಸಾಮೂಹಿ ಕಾರ್ಯಕ್ರಮದಲ್ಲಿ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಅಡ್ಡಪಲ್ಲಕ್ಕಿ ಉತ್ಸವ ಕೂಡಾ ಜರಗುವುದು. ಅದೇ ದಿನ ಆಧ್ಯಾತ್ಮಿಕ ಪ್ರವಚನ ಮಹಾಮಂಗಲವಾಗುವುದು. ಅಲ್ಲದೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ಜರುಗಲಿವೆ. ಕುಷ್ಟಗಿಯ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಸ್ಥಳೀಯ ಮುತ್ತಯ್ಯ ಮಹಾಸ್ವಾಮಿಗಳು, ಎ. ತೀರ್ಥೇಂದ್ರ ಮಹಾಸ್ವಾಮಿಗಳು, ಡಾ. ಪಿ.ಎಸ್.ಚೌಕಿಮಠ ಹನುಮನಾಳ, ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರು ಹಾಗೂ ಸಂಸದ ಸಂಗಣ್ಣ ಕರಡಿ ಸೇರಿದಂತೆ ಅನೇಕ ಮಹನೀಯರು ಪಾಲ್ಗೊಳ್ಳುವರು. ತುಗ್ಗಲಡೋಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವರಾಜ ಬೆಣ್ಣಿ ಅಧ್ಯಕ್ಷತೆವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..!!