ಕುಷ್ಟಗಿಯಲ್ಲಿ ರಾಜಕೀಯ ‘ಚಿಣಿ’ಪಣಿ ಆಟ..!

 

ಶರಣಪ್ಪ ಕುಂಬಾರ / ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಚದುರಂಗದಾಟ ಜೊರಾಗಿಯೇ ನಡೆದಿದೆ..!

ವಿಧಾನಸಭಾ ಚುನಾವಣೆ ಇನ್ನೂ 6 ತಿಂಗಳು ಬಾಕಿ ಇರುವಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಟಿಕೇಟ್ ಗಾಗಿ ಬಾರಿ ಪೈಪೋಟಿ ನಡೆದಿದೆ. ಇದಕ್ಕೆ ಪುಷ್ಟಿ ಎಂಬಂತೆ ನೀರಾವರಿ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪ್ರಭಾಕರ ಚಿಣಿ ಅವರಿಗೆ ಕುಷ್ಟಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಟಿಕೇಟ್ ಗೆ ಅರ್ಜಿ ಸಲ್ಲಿಸಲು ಕ್ಷೇತ್ರದ ರಾಜಕಾರಣಿಗಳ ನಿಯೋಗ ರಾಜಧಾನಿ ಬೆಂಗಳೂರಿಗೆ ತೆರಳಿದೆ. ಟಿಕೇಟ್ ಗಾಗಿ ಅರ್ಜಿ ಸಲ್ಲಿಸುವುದರ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೆ ನಿಯೋಗದ ಸದಸ್ಯರು ಇಲ್ಲಿನ ಸದ್ಯದ ರಾಜಕೀಯ ಪರಿಸ್ಥಿತಿ ಮನವರಿಕೆ ಮಾಡಿಕೊಡಲಿದ್ದಾರೆ ಎಂಬ ಮಾಹಿತಿ ಸ್ಪಷ್ಟವಾಗಿದೆ. ಈ ರಾಜಕೀಯ ಚಿಣಿಪಣಿ ಆಟದಲ್ಲಿ “ಚಿಣಿ” ಯಾರಿಗೆ ಬಡಿಯಲಿದೆ ಎಂಬ ಚರ್ಚೆಯಂತು ಜೊರಾಗಿ ನಡೆದಿರುವುದಂತು ಸತ್ಯ.

ಹನುಮಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಚಂದಪ್ಪ ತಳವಾರ, ಮುಖಂಡರಾದ ಅಶೋಕ ಬಳೂಟಗಿ, ಹನುಮಂತಪ್ಪ ಚೌಡಕಿ, ಶಂಕ್ರಯ್ಯ ಕಂಪಾಪೂರಮಠ, ಪರಶುರಾಮ ನಾಗರಾಳ, ಪುರಸಭೆ ಸದಸ್ಯರಾದ ವಸಂತ ಮೇಲಿನಮನಿ, ಅಂಬಣ್ಣ ಭಜಂತ್ರಿ, ಕಸಾಪ ಅಧ್ಯಕ್ಷ ವೀರೇಶ ಬಂಗಾರಶೆಟ್ಟರ್ ಸೇರಿದಂತೆ ಇನ್ನಿತರರು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದಾರೆ..!!