ಹನುಮನಾಳ ಭಾಗದಲ್ಲಿ ವಿದ್ಯುತ್ ಸ್ಥಗಿತ

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಭಾಗದ ಕೆಲ ಗ್ರಾಮಗಳಲ್ಲಿ 15-11-2022 ರಂದು ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು..!

ಹೊಸ ವಿದ್ಯುತ್ ಜಾಲ ಜೋಡಣಾ ಕಾರ್ಯದ ನಿಮಿತ್ಯ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಹನುಮನಾಳ ಪಟ್ಟಣ ಸೇರಿದಂತೆ ರಾಂಪೂರ, ಪಟ್ಟಲಚಿಂತಿ, ಮಿಟ್ಟಲಕೊಡ, ಬೊಮ್ಮನಾಳ, ನಿಲೋಗಲ್, ಮಾಲಗಿತ್ತಿ ಹಾಗೂ ಗುಡ್ಡದ ದೇವಲಾಪೂರ ಗ್ರಾಮಗಳಲ್ಲಿ ವಿದ್ಯುತ್ ಸ್ಥಗಿತಗೊಳಿಸಲಾಗುವುದು ಎಂದು ಜೆಸ್ಕಾಂ ಕುಷ್ಟಗಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ಕಾರ್ಯ ಮತ್ತು ಪಾಲನೆ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ..!!