ಕೂಕನೂರು ನವೋದಯ ಶಾಲೆ ಮುಂಭಾಗದಲ್ಲಿ ಪಾಲಕರ ಪ್ರತಿಭಟನೆ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕೂಕನೂರು ಪಟ್ಟಣದಲ್ಲಿರುವ ಜವಾಹರ ನವೋದಯ ಶಾಲೆಯ ಮುಂಭಾಗದಲ್ಲಿ ಶಾಲೆಗೆ ಮೂಲಭೂತ ಸೌಲಭ್ಯಗಳಿಗೆ ಒತ್ತಾಯಿಸಿ ಪಾಲಕರು ಪ್ರತಿಭಟನೆ ನಡೆಸಿದ ಪ್ರಸಂಗ ಜರುಗಿದೆ..!

1986-1987 ರಲ್ಲಿ ಜಾರಿಗೆ ಬಂದಿರುವ ಜವಾಹರ ನವೋದಯ ಕೇಂದ್ರಿಯ ಶಾಲೆಗೆ ಯಾವುದೇ ತರಹದ ಮೂಲಭೂತ ಸೌಲಭ್ಯಗಳು ಇಲ್ಲ. ಸುಮಾರು 36 ವರ್ಷಗಳ ಹಳೆಯದಾದ ಕಟ್ಟಡಗಳು ಸಂಪೂರ್ಣ ಶಿಥಿಲಗೊಂಡಿವೆ. ಸುಸಜ್ಜಿತ ಶೌಚಾಲಯಗಳು ಇಲ್ಲ. ವಿದ್ಯಾರ್ಥಿಯನಿಯರ ಶೌಚಾಲಯ ಸೇರಿದಂತೆ ಕೊಠಡಿಗಳಿಗೆ ಬಾಗಿಲುಗಳು ಸರಿಯಾಗಿಲ್ಲ. ವಿದ್ಯಾರ್ಥಿಗಳಿಗೆ ತಣ್ಣೀರು ಗತಿಯಾಗಿದೆ. ವಿಶೇಷವಾಗಿ ಫ್ಲೋರೈಡ್ ನೀರು ಸರಬರಾಜ ಆಗುತ್ತಿದೆ. ಜೊತೆಗೆ ರಸ್ತೆಗಳು ಸೇರಿದಂತೆ ಕಟ್ಟಡದ ವಾತಾವರಣ ಮಕ್ಕಳ ವಿದ್ಯಾರ್ಜನೆಗೆ ಯಾವುದು ಮೂಲಭೂತ ಸೌಕರ್ಯಗಳು ಸರಿಯಾಗಿಲ್ಲ ಎಂಬ ದೂರಿನೊಂದಿಗೆ ಪಾಲಕರು ಪ್ರತಿಭಟನೆ ನಡೆಸಿದರು. ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ, ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಹಾಗೂ ಗಣಿ ಸಚಿವ ಹಾಲಪ್ಪ ಆಚಾರ್ಯ ಹಾಗೂ ಶಾಲೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಿಗೆ ಇತ್ತೀಚಿಗೆ ಮನವಿ ಪತ್ರಗಳನ್ನು ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಪಾಲಕರಾದ ಕುಬೇರ ಮಜ್ಜಿಗಿ, ಕಲ್ಲಪ್ಪ ತಳವಾರ, ಸುರೇಶ ಬೇನಾಳ, ಶಿವಾನಂದ ಪ್ಯಾಟಿ, ಕೆ.ಬಿ.ರಾಜು, ಆರ್.ಎನ್.ಮೇಟಿ, ಪ್ರಶಾಂತ ದಂಡಿನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು..!!