ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಯಲಬುರ್ಗಾ ಪಟ್ಟಣದ ಐಶ್ವರ್ಯ ಬಸವರಾಜ ವಂಟೇಲಿ ಹಾಗೂ ಬನ್ನಿಕಟ್ಟಿ ಪ್ರೌಢಶಾಲೆಯ 10 ನೇ ತರಗತಿಯ ಗಾಯಿತ್ರಿ ಮೌಳೇಶಪ್ಪ ಅಡವಿಬಾವಿ ಎಂಬ ಇಬ್ಬರು ಕ್ರೀಡಾಪಟುಗಳು ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ..!
ಗಾಯಿತ್ರಿ ಅಡವಿಬಾಯಿ
ದಿನಾಂಕ 14-11-2022 ರಿಂದ 19-11-2022 ರವರೆಗೆ ಜಮ್ಮು ಕಾಶ್ಮೀರದಲ್ಲಿ ಜರಗುವ 48 ನೇ ರಾಷ್ಟ್ರೀಯ ಜೂನಿಯರ್ 18 ವರ್ಷದ ಮಹಿಳಾ ವಾಲಿಬಾಲ್ ಕರ್ನಾಟಕ ತಂಡವನ್ನು ಇಬ್ಬರು ಕ್ರೀಡಾಪಟುಗಳು ಪ್ರತಿನಿಧಿಸಲಿದ್ದಾರೆ. ಇಂತಹ ವಿಶಿಷ್ಟ ಕ್ರೀಡಾಪಟುಗಳ ಪೈಕಿ ಐಶ್ವರ್ಯ ದಕ್ಷಿಣ ಕನ್ನಡ ಜಿಲ್ಲೆಯ ಎಸ್.ಡಿ.ಎಂ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ಅಭ್ಯಾಸಮಾಡುತ್ತಿದ್ದಾಳೆ. ಅಲ್ಲದೆ, ಇಬ್ಬರು ಕ್ರೀಡಾಪಟುಗಳು ಎಸ್ಸೆಸ್ಸೆಲ್ಸಿ ವರೆಗೆ ಕೊಪ್ಪಳ ಜಿಲ್ಲಾ ಕ್ರೀಡಾ ವಸತಿ ಶಾಲೆಯಲ್ಲಿ ತರಬೇತಿ ಪಡೆದಿರುವುದು ಕೂಡಾ ವಿಶೇಷ. ವಾಲಿಬಾಲ್ ತರಬೇತಿದಾರರಾದ ಸುರೇಶ ಯಾದವ, ಖೋಖೋ ಜಿಲ್ಲಾ ತರಬೇತಿದಾರ ಯತಿರಾಜು, ವಾಲಿಬಾಲ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಗವಿಸಿದ್ಧಪ್ಪ ನಾಗಲೀಕರ್ ಹಾಗೂ ಸರ್ವ ಸದಸ್ಯರು ಸೇರಿದಂತೆ ಪಾಲಕರು, ಅಪಾರ ಅಭಿಮಾನಿಗಳು ಕ್ರೀಡಾಪಟುಗಳ ಸಾಧನೆಗೆ ಅಭಿನಂದಿಸಿದ್ದಾರೆ..!!