ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಕೆಸೂರು ಗ್ರಾಮದ ಬಳಿ ಖಾಸಗಿ ಗಾಳಿ ವಿದ್ಯುತ್ ಕಂಪನಿವೊಂದರಲ್ಲಿ ಕೆಲಸ ನಿರ್ವವಹಿಸುತ್ತಿದ್ದ ನಿವೃತ್ತ ಸೈನಿಕ ಮೊಹಮ್ಮದ್ ರಫೀ ಗುಲಾಮ್ ರಸೂಲ್ ಸಾಬ್ (52) ಎಂಬುವರ ಮೇಲೆ ವ್ಯಕ್ತಿ ಒರ್ವ ಹಲ್ಲೆಗೊಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ..!
ಸ್ವಿಜಲಾನ್ ವಿಂಡ್ ಮಿಲ್ ಪ್ರೈವೇಟ್ ಲಿ. ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವವಹಿಸುತ್ತಿದ್ದ ಮಹಮ್ಮದ್ ರಫೀ ಎಂಬುವರು ಹಾಗೂ ಸಿಬ್ಬಂದಿಯವರು ದಿನಾಂಕ 24-11-2022 ರಂದು ವಿದ್ಯುತ್ ತಯಾರಿಕೆ ಯಂತ್ರದ ಬಳಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಅವಾಚ್ಛ ಶಬ್ಧಗಳಿಂದ ಮಾತನಾಡುತ್ತಾ ತಿಂಗಳ ಮಾಮೂಲು ನೀಡಿ ಕೆಲಸ ಮಾಡಬೇಕೆಂದು ಗಧರಿಸಿ, ಮ್ಯಾನೇಜರ ಮಹಮ್ಮದ್ ರಫೀ ಅವರಿಗೆ ದೋಟಿಹಾಳ ಗ್ರಾಮದ ಮೈನುದ್ದೀನ್ ಸಾಬ್ ಹಿರೇಮನಿ ಎಂಬುವರು ಬಿದರಿನ ಕೋಲಿನಿಂದ ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿರುವುದರಿಂದ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ..!!