ದಿಢೀರನೆ ರಸ್ತೆಗೆ ಉರುಳಿದ ಮರ : ಬೈಕ್ ಸವಾರ ಪ್ರಾಣಾಪಾಯದಿಂದ ಪಾರು

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪಟ್ಟಣದೊಳಗೆ ಹಾದು ಹೋಗಿರುವ ರಾಜ್ಯ ಹದ್ದಾರಿಯಲ್ಲಿ ಬೃಹದಾಕಾರದ ಮರವೊಂದು ದಿಢೀರನೆ ರಸ್ತೆಗೆ ಉರುಳಿದ್ದು, ರಸ್ತೆಮೇಲೆ ಪ್ರಯಾಣಿಸುತಿದ್ದ ಬೈಕ್ ಸವಾರ ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ (ಸೋಮವಾರ) ದಿನಾಂಕ 28-11-2022 ರಂದು ಸಂಜೆ 7 ಗಂಟೆ ಸುಮಾರಿಗೆ ಸಂಭವಿಸಿದೆ..!

ಇಲ್ಲಿನ ಮಾರುತಿ ವೃತ್ತದಿಂದ ಗಜೇಂದ್ರಗಡ ರಸ್ತೆ ಮಾರುತಿ ಚಿತ್ರಮಂದಿರದ ವರೆಗೆ ನಡೆಯುತ್ತಿರುವ ಡಬಲ್ ರಸ್ತೆ ನೂತನ ಕಾಮಗಾರಿ ಹಿನ್ನೆಲೆಯಲ್ಲಿ ರಸ್ತೆ ಅಗಲಿಕರಣಕ್ಕೆ ಒಂದುವರೆ ಅಡಿಯಷ್ಟು ಆಳದಲ್ಲಿ ನೆಲವನ್ನು ಅಗೆಯಲಾಗಿದೆ.

ಟಿಎಪಿಎಂಎಸ್ ಕಾರ್ಯಾಲಯ ಮುಂದಿನ ಅಬ್ದುಲ್ ಕಲಾಂ ವೃತ್ತದ ಬಳಿ ಈ ದುರ್ಘಟನೆ ಸಂಭವಿಸಿದೆ.
ರಸ್ತೆ ಪಕ್ಕದಲ್ಲಿ ನೆಲ ಅಗೆದಿದ್ದರಿಂದ ರಸ್ತೆ ಬದಿಯಲ್ಲಿ ಬೆಳೆದಿದ್ದ ಬೃಹದಾಕಾರದ ಮರ ಬೇರು ಸಮೇತ ಸಡಿಲಗೊಂಡು ಏಕಾಏಕಿ ರಸ್ತೆ ಮಧ್ಯೆ ಉರುಳಿಬಿದ್ದಿದೆ. ಆ ಸಂದರ್ಭದಲ್ಲಿ ಬೈಕ್ ಸವಾರನೊಬ್ಬ ರಸ್ತೆ ಇನ್ನೊಂದು ಬದಿಯಲ್ಲಿ ಸಂಚರಿಸುತ್ತಿದ್ದರಿಂದ ಅದೃಷ್ಟವಶಾತ್ ಬೈಕಿನಿಂದ ಜಿಗಿದು ಕೂದಲೆಳೆಯಲ್ಲಿ ಪಾರಾಗಿದ್ದಾನೆ. ಈ ರಸ್ತೆಯಲ್ಲಿ ಬಿಟ್ಟುಬಿಡದೇ ನೂರಾರು ವಾಹನಗಳು ಸಂಚರಿಸುವದು ಹೆಚ್ಚು. ಇಂದು ಸಂಭವಿಸುತಿದ್ದ ದೊಡ್ಡ ಅವಘಡವೇ ತಪ್ಪಿದಂತಾಗಿದೆ..!?