ತ್ರಿವರ್ಣದ ಸ್ಥಿತಿ

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಬಾಗಲಕೋಟೆ (ಕೊಪ್ಪಳ) : ಇಡೀ ದೇಶವೇ ಅಮೃತ ಮಹೋತ್ಸವದ ಸಂಭ್ರಮದಲ್ಲಿ ತೆಲಾಡುತ್ತಿರುವ ಈ ಶುಭ ಸಂದರ್ಭದಲ್ಲಿ ರಾಷ್ಟ್ರಧ್ವಜದ ಸ್ಥಿತಿ ಮಾತ್ರ ಅದೋಗತಿಗೆ ಬಂದು ತಲುಪಿದೆ..!?

ಬಾಗಲಕೋಟೆ ಜಿಲ್ಲೆಯ ಇಲಕಲ್ ಪಟ್ಟಣ ಸಮೀಪದಲ್ಲಿರುವ ‘ತುಂಬ’ ಎಂಬ ಗ್ರಾಮದ ವೃತ್ತದ ಬಳಿ ಇರುವ ಆಲದ ಮರದ ಬಳಿ ರಾಷ್ಟ್ರಧ್ವಜವು ಹೊಲಸು ಮೈಮೇಲೆ ಹಾಕಿಕೊಂಡು ಅನಾಥ ಬಿದ್ದಿದೆ. ಇದನ್ನು ಗಮನಿಸಿದರೆ, 75 ನೇ ಸ್ವಾತಂತ್ರ್ಯದ ಸವಿನೆನಪಿಗಾಗಿ ‘ಅಮೃತ ಮಹೋತ್ಸವದ’ ಸಡಗರ ಸಂಭ್ರಮಕ್ಕಾಗಿ ಮತ್ತು ರಾಷ್ಟ್ರೀಯತೆಯ ಪ್ರತೀಕವಾಗಿ ವಾಹನವೊಂದಕ್ಕೆ ಬಳಸಿದ ರಾಷ್ಟ್ರಧ್ವಜ ಇದಾಗಿದೆ ಎಂಬುದು ಇಲ್ಲಿನ ಪ್ರವಾಸಿಗರ ಅಭಿಪ್ರಾಯವಾಗಿದೆ. ಇನ್ನಾದರೂ ಈ ಭಾಗದ ಗ್ರಾಮ ಪಂಚಾಯತಿ ಸಿಬ್ಬಂದಿ ಕೊಳಕು ವಾತಾವರಣದಲ್ಲಿ ಬಿದ್ದಿರುವ ರಾಷ್ಟ್ರಧ್ವಜದ ರಕ್ಷಣೆಗೆ ಮುಂದಾಗಿ ರಾಷ್ಟ್ರಧ್ವಜದ ಪಾವಿತ್ರ್ಯತೆ ಮತ್ತು ಘನತೆಗೆ ಮುಂದಾಗಬೇಕಾಗಿರುವುದು ಬಾಕಿ ಇದೆ..!?