ಕೃಷಿ ಅಧಿಕಾರಿ ನಾಪತ್ತೆ

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ರೈತ ಸಂಪರ್ಕ ಕೇಂದ್ರದ ಅಧಿಕಾರಿ ರಾಘವೇಂದ್ರ ಕೊಂಡಗುರಿ (37) ಎಂಬುವರು ದಿನಾಂಕ 01-12-2022 ರಂದು ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ..!

ನಾಪತ್ತೆಯಾದ ನೌಕರ ಯಲಬುರ್ಗಾ ತಾಲೂಕಿನ ಹಿರೇಅರಳಿಹಳ್ಳಿ ನಿವಾಸಿಯಾಗಿದ್ದು, ಈ ಕುರಿತು ಆತನ ಪತ್ನಿ ವಿದ್ಯಾಶ್ರೀ ರಾಘವೇಂದ್ರ ಕೊಂಡಗುರಿ ಎಂಬುವರು ತನ್ನ ಪತಿಯನ್ನು ಹುಡುಕಿಕೊಡುವಂತೆ ಕುಷ್ಟಗಿ ಠಾಣೆಗೆ ದಿನಾಂಕ 06-12-2022 ರಂದು ನೀಡಿದ ದೂರಿನಲ್ಲಿ (ಗುನ್ನೆ ನಂ : 247/2022) ಮನವಿ ಮಾಡಿಕೊಂಡಿದ್ದಾರೆ.

ವೈಯಕ್ತಿಕ ಹಾಗೂ ಕಚೇರಿ ಕೆಲಸದ ನಿಮಿತ್ತ ಕುಷ್ಟಗಿ ಪಟ್ಟಣಕ್ಕೆ ಪರಿಚಯಸ್ಥರ ಬೈಕ್ ಮೇಲೆ ಬಂದ ಕೃಷಿ ಅಧಿಕಾರಿ, ಇಲ್ಲಿಯ ಕೇಂದ್ರಿಯ ಬಸ್ ನಿಲ್ದಾಣದ ಹಿಂದೆ ಟೈಲ್ಸ್ ಅಂಗಡಿ ಹತ್ತಿರ ಬಂದಿದ್ದು, ಕಚೇರಿಗೂ ಹೋಗದೆ, ಮನೆಗೂ ಹೋಗದೆ ನಾಪತ್ತೆಯಾಗಿರುವುದು ದೂರಿನಲ್ಲಿ ತಿಳಿಸಲಾಗಿದೆ. ಈ ವ್ಯಕ್ತಿ ಪತ್ತೆಯಾದಲ್ಲಿ ಕುಷ್ಟಗಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ..!!