ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಅಪಘಾತದಲ್ಲಿ ಮೃತಪಟ್ಟ ಸಿಪಿಐ ರವಿ ಉಕ್ಕುಂದ ಹಾಗೂ ಪತ್ನಿ ಮಧು ಉಕ್ಕುಂದ ಅವರ ಸ್ವಗ್ರಾಮ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ರಟ್ಟಿಹಳ್ಳಿ ಗ್ರಾಮದಲ್ಲಿ ಹಿಂದು ಸಂಪ್ರದಾಯದಂತೆ ಕುಟುಂಬಸ್ಥರು ಸೇರಿದಂತೆ ಅಪಾರ ಅಭಿಮಾನಿಗಳ ಮಧ್ಯದಲ್ಲಿ ಅಂತ್ಯ ಸಂಸ್ಕಾರ ಕೈಗೊಳ್ಳಲಾಗಿತು..!
ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಸಿಪಿಐ ಆಗಿ ಕರ್ತವ್ಯದಲ್ಲಿ ರವಿ ಉಕ್ಕುಂದ ಹಾಗೂ ಪತ್ನಿ ಮಧು ಉಕ್ಕುಂದ ಅವರು ದಿನಾಂಕ 07-12-2022 ರಂದು ಅಪಘಾತದಲ್ಲಿ ನಮ್ಮನ್ನು ಅಗಲಿದ್ದರು ಎಂದು ತಿಳಿಸಲು ವಿಷಾಧವೆನಿಸುತ್ತಿದೆ. ರವಿ ಅವರು ಪೊಲೀಸ್ ಇಲಾಖೆ ಸೇರಿದಂತೆ ಕೊಪ್ಪಳ ಜಿಲ್ಲೆಯಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ವಿಶೇಷವಾಗಿ ಕೊಪ್ಪಳ ನಗರದಲ್ಲಿ ಸಿಪಿಐ ಆಗಿ ಕರ್ತವ್ಯದಲ್ಲಿದ್ದಾಗ ಹಲವು ಜನಪರ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಮನೆಮಾತಾಗಿದ್ದರು. ಚುನಾವಣೆ ಬಂದೋಬಸ್ತ್ , ಗವಿಸಿದ್ಧೇಶ್ವರ ಜಾತ್ರೆ, ಗಣೇಶ ವಿಸರ್ಜನೆ ಸೇರಿದಂತೆ ಪ್ರಮುಖ ಬಂದೋಬಸ್ತ್ ಕೈಗೊಳ್ಳುವಲ್ಲಿ ಜನಮಾನಸದಲ್ಲಿ ಉಳಿದುಕೊಂಡಿದ್ದರು. ರವಿ ಉಕ್ಕುಂದ ದಂಪತಿ ಸಾವಿಗೆ ಇಡೀ ಕೊಪ್ಪಳ ಜಿಲ್ಲೆಯ ಜನರು ಕಂಬಿನಿ ಮಿಡಿದಿದ್ದಾರೆ..!!