ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ವಿಜಯನಗರ (ಕೊಪ್ಪಳ) : ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಬಯಲು ರಂಗಮಂದಿರಕ್ಕೆ ಹೋಗುವ ದಾರಿ ಮಧ್ಯದಲ್ಲಿ ನುಡಿ ಹಬ್ಬದ ಹಿನ್ನಲೆಯಲ್ಲಿ ಅತಿಥಿಗಳನ್ನು ಕರೆದುಕೊಂಡು ಹೋಗಲು ವಿವಿ (ಮುಖ್ಯ ಅತಿಥಿಗಳ ಆಗಮನಕ್ಕಾಗಿ) ಶಿಷ್ಟಾಚಾರದ ಸರತಿಗಾಗಿ ಬರೆದ ಅಂಕಿಗಳು ಇಂಗ್ಲೀಷ್ ನಿಂದ ಕೂಡಿರುವುದು ಗೊಂದಲಕ್ಕೆ ಕಾರಣವಾಗಿತು..!
ವಿಶೇಷವಾಗಿ ಕನ್ನಡ ಭಾಷೆಯ ಉಳಿವಿನ ಮೂಲ ಉದ್ಧೇಶದ ಹಿನ್ನಲೆಯಲ್ಲಿ ಸ್ಥಾಪಿಸಲಾಗಿರುವ ಕನ್ನಡ ವಿಶ್ವ ವಿದ್ಯಾಲಯದಲ್ಲಿ ಅಲ್ಲದೆ, ವಿಶೇಷವಾಗಿ ‘ಕನ್ನಡ’ ನುಡಿ ಹಬ್ಬದಲ್ಲಿ ಕುಲಪತಿಗಳಿಂದ ಹಿಡಿದು, ಕನ್ನಡ ನಾಡಿನ ಖ್ಯಾತ ದಿಗ್ಗಜರನ್ನು ವಿವಿಧ ಮಜಲುಗಳಿಂದ ಆಹ್ವಾನಿಸುವುದಕ್ಕಾಗಿ ಬರೆಯಲಾದ ಅಂಕಿಗಳು ಇಂಗ್ಲಿಷ್ ಅಂಕಿಗಳಿಂದ ಕೂಡಿದ್ದು ಅಪ್ಪಟ ಕನ್ನಡ ಅಭಿಮಾನಿಗಳನ್ನು ಕೇರಳಿಸಿದ ಪ್ರಸಂಗ ಜರುಗಿತು. ಮುಂಬರುವ ದಿನಮಾನಗಳಲ್ಲಾದರು ಇಂಗ್ಲಿಷ್ ಅಂಕಿಗಳ ಬದಲಾಗಿ ಕನ್ನಡಮ್ಮನ ಅಂಕಿಗಳು ವಿವಿ ಸ್ವಾಗತ ಆವರಣದಲ್ಲಿ ರಾರಾಜಿಸಲಿ ಎಂಬುದು ಕಟ್ಟಾ ಕನ್ನಡಿಗರ ಆಶಯ..!!