ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪಟ್ಟಣದ ಹೊರವಲಯದ ಶಾಖಾಪುರ ರಸ್ತೆಯಲ್ಲಿನ ಮನೆವೊಂದು ಹಗಲಿನಲ್ಲಿಯೇ ಕಳ್ಳತನವಾಗಿದೆ..!
ಹನುಮಂತಪ್ಪ ಕುಂಟೆಪ್ಪ ಭಜಂತ್ರಿ ಇವರಿಗೆ ಸೇರಿದ ಮನೆಯ ಲಾಕರ್ ನಲ್ಲಿದ್ದ 7 ಲಕ್ಷ ರೂಪಾಯಿಗಳು ಸೇರಿದಂತೆ 10 ತೊಲೆ ಬಂಗಾರ ಕಳ್ಳತನವಾಗಿದೆ. ಮನೆ ಮಾಲಿಕರು ಸೇರಿದಂತೆ ಸಹೋದರರು ಮನೆಯಿಂದ ಹೊರಗಡೆ ಕೆಲಸಕ್ಕೆ ಹೋಗುವುದನ್ನು ಗಮನಿಸಿದ ಕಳ್ಳರು ಕೇವಲ ಒಂದು ಗಂಟೆವೊಳಗಾಗಿ ಕಳ್ಳತನಮಾಡಿರುವುದು ಸ್ಪಷ್ಟವಾಗಿದೆ. 11-30 ರ ಸುಮಾರಿಗೆ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..!!