ಹತ್ತು ಜನರಿಗೆ ಕಚ್ಚಿದ ಹುಚ್ಚು ನಾಯಿ

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ರಂಗಾಪುರ ಗ್ರಾಮದ ಹತ್ತು ಜನರಿಗೆ ಹುಚ್ಚು ನಾಯಿವೊಂದು ಕಚ್ಚಿದ ಘಟನೆ ಜರುಗಿದೆ..!

ಸುಜಾತ ಮಲ್ಲಾಪೂರ(4), ಶಿವಕುಮಾರ ಮಲ್ಲಾಪೂರ(11), ಶಿವಕುಮಾರ ಕಡಿವಾಲ(15) ಗಿರಿಯಪ್ಪ ನೆಲ್ಲೂರು(62), ಶರಣಪ್ಪ ಮಲ್ಲಾಪೂರ(54) ಸೇರಿದಂತೆ ಇನ್ನೂ 5 ಜನರಿಗೆ ಹುಚ್ಚು ನಾಯಿ ಕಚ್ಚಿರುವುದು ಪಕ್ಕಾ ಆಗಿದೆ. ತೀವ್ರ ಗಾಯಗೊಂಡ ಸುಜಾತ ಮಲ್ಲಾಪೂರ ಹಾಗೂ ಶಿವಕುಮಾರ ಮಲ್ಲಾಪೂರ ಎಂಬುವರು ಕುಷ್ಟಗಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕೆಲವರು ಹನುಮನಾಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡರೇ.. ಇನ್ನೂ ಕೆಲವರು ಬಾದಾಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದು ತಿಳಿದುಬಂದಿದೆ..!!