ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ನರೇಗಾ ಕೂಲಿ ಕಾರ್ಮಿಕರಿಗೆ ಕಡಿಮೆ ಕೂಲಿ ಹಣ ಪಾವತಿಸುವುದನ್ನು ವಿರೋಧಿಸಿ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಕೂಲಿಕಾರ್ಮಿಕರು ಪ್ರತಿಭಟನೆ ನಡೆಸಿದ ಪ್ರಸಂಗ ಜರುಗಿದೆ..!
ಬಿಜಕಲ್ ಗ್ರಾಪಂ ವ್ಯಾಪ್ತಿಯ ಕೆರೆ ಹಾಗೂ ಬೋದೂರು ಗ್ರಾಮದ ನಾಲಾ ಹೂಳೆತ್ತುವ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಹಾಗೂ ಪುರುಷ ಕೂಲಿ ಕಾರ್ಮಿಕರು ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನರೇಗಾ ಯೋಜನೆಯಲ್ಲಿ ಸಮರ್ಪಕವಾಗಿ ಕೆಲಸ ನೀಡುತ್ತಿಲ್ಲ. ಜಾಬ್ ಕಾರ್ಡ್ ಇದ್ದರೂ ಕಂಪ್ಯೂಟರ್ ಆಪರೇಟರ್ ಗಳು ಆಧಾರಕಾರ್ಡ ಲಿಂಕ್ ಇಲ್ಲವೆಂದು ಕೆಲಸ ನೀಡುತ್ತಿಲ್ಲ. ದಿನದ ಕೂಲಿ 309 ರೂಪಾಯಿ ಇದೆ. ಆದರೆ, 270 ರೂಪಾಯಿ ಕೂಲಿ ನೀಡುತಿದ್ದಾರೆ. ಕಾರಣ ಕೇಳಿದರೆ, ಕಡಿಮೆ ಕೆಲಸದ ನೆಪ ವೊಡ್ಡುತಿದ್ದಾರೆ. ಕೆಲಸದ ಸ್ಥಳದಲ್ಲಿನ ಮೂಲಸೌಕರ್ಯ, ಪರಿಕರ ವೆಚ್ಚ, ಪ್ರಯಾಣದ ವೆಚ್ಚವನ್ನು ನೀಡುತ್ತಿಲ್ಲವೆಂದು ಆರೋಪಿಸಿದ್ದಾರೆ..!!
