ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಚಿತ್ರದುರ್ಗದ ಮುರಘಾ ಶರಣರ ಪ್ರಕರಣ ಬೆಳಕಿಗೆ ಬರಲು ಪ್ರಮುಖ ಕಾರಣವಾದ ಮೈಸೂರು ಮೂಲದ ‘ಒಡನಾಡಿ’ ಸಂಸ್ಥೆಯನ್ನು ಕೊಪ್ಪಳದ ಬಾಲಕಿಯರು ಸಂಪರ್ಕಿಸಿರುವುದು ಈ ಸುದ್ದಿಯ ವಿಶೇಷ..!
ಬಾಲಕಿಯರ ಕಿರುಕುಳಕ್ಕೆ ಕಾರಣವಾಗಿರುವವರನ್ನು ಪತ್ತೆ ಹಚ್ಚಿ ಸೂಕ್ತ ತನಿಖೆ ನಡೆಸಿ ವರದಿ ನೀಡಲು ‘ಮೈಸೂರಿನ ಒಡನಾಡಿ ಸೇವಾ ಸಂಸ್ಥೆ’ ಕೊಪ್ಪಳ ಜಿಲ್ಲಾ ಕಚೇರಿವೊಂದಕ್ಕೆ ಪತ್ರ ಬರೆದಿದೆ ಎಂದು ತಿಳಿದು ಬಂದಿದೆ. ಸಂಸ್ಥೆಯ ಹಾಗೂ ಬಾಲಕೀಯರ ಮನವಿ ಪತ್ರವನ್ನು ಆಧರಿಸಿ, ಜಿಲ್ಲಾ ಕಚೇರಿಯು ತಾಲೂಕಾ ಮಟ್ಟದ ಕಚೇರಿಗೆ ಸೂಕ್ತ ತನಿಖೆಗೆ ಸ್ಥಳಕ್ಕೆ ಭೇಟಿ ನೀಡಿ, ವರದಿ ಸಲ್ಲಿಸುವಂತೆ ಪತ್ರವೊಂದನ್ನು ಬರೆದಿದೆ. ಚಿತ್ರದುರ್ಗದ ಮುರಘಾ ಶರಣರ ಪ್ರಕರಣ ಬೆಳಕಿಗೆ ಬರುವುದಕ್ಕೆ ಒಡನಾಡಿ ಸಂಸ್ಥೆ ಎಷ್ಟೊಂದು ಗಟ್ಟಿಯಾಗಿ ನಿಂತಿದ್ದನ್ನು ಅರಿತ ಇಲ್ಲಿನ ಬಾಲಕೀಯರು ತಮಗೂ ಕೂಡಾ ಯಾವುದಾದರೂ ಮಾರ್ಗದಲ್ಲಿ ನ್ಯಾಯ ಸಿಗಬಹುದು ಎಂದು ಬಯಸಿ, ಗೌಪ್ಯತೆಗಾಗಿ ಎಲ್ಲಿಯೂ ತಮ್ಮ ಹೆಸರನ್ನು ಪ್ರಸ್ತಾಪಿಸದೆ, ತಾವು ವಾಸಿಸುವ ಸಂಸ್ಥೆ ಮತ್ತು ಸ್ಥಳದ ಹೆಸರನ್ನು ಮಾತ್ರ ಪತ್ರದಲ್ಲಿ ನಮೂದಿಸಿದ್ದಾರೆ ಎನ್ನಲಾಗಿದೆ. ಆದರೆ, ಸವಿವರದ ಬಾಲಕಿಯರ ಮನವಿ ಪತ್ರ ಪುರಸ್ಕರಿಸಿದ ಒಡನಾಡಿ ಸಂಸ್ಥೆ ಕೂಡಲೇ ಕೊಪ್ಪಳ ಜಿಲ್ಲೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಕ್ತ ಕ್ರಮ ಜರುಗಿಸಲು ಒತ್ತಾಯಿಸಿ ಮರು ಪತ್ರ ಬರೆದಿದೆ. ಬಾಲಕಿಯರ ವಯಕ್ತಿಕ ಮಾಹಿತಿಯನ್ನು ಏಲ್ಲಿಯೂ ಬಿಟ್ಟುಕೊಡದ ಇಲಾಖೆ ಸೂಕ್ತ ವರದಿ ಜೊತೆಗೆ ತನಿಖೆಗೆ ಒತ್ತಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಮುರಘಾ ಶರಣರ ಪ್ರಕರಣದಿಂದ ಎಚ್ಚತ್ತುಕೊಂಡ ಬಾಲಕಿಯರು ನ್ಯಾಯಕ್ಕಾಗಿ ದೂರದ ಒಡನಾಡಿ ಸಂಸ್ಥೆ ಬೆನ್ನ ಹತ್ತಿರುವುದು ವಿಶೇಷತೆಗಳೊಲ್ಲೊಂದು ವಿಶೇಷ. ಆದರೆ, ಗಂಭೀರತೆ ಪಡೆದ ಪ್ರಕರಣ ಸೂಕ್ತ ತನಿಖೆಯಿಂದ ಬಟಾ ಬಯಲಾಗಿ ಮುಗ್ಧ ಬಾಲಕೀಯರಿಗೆ ನ್ಯಾಯ ಲಭಿಸಬೇಕಾಗಿರುವುದು ಮಾತ್ರ ಬಾಕಿ ಇದೆ..!?

