ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಭತ್ತದ ಕಣಜ ಎಂದು ಪ್ರಸಿದ್ಧಿಯಾಗಿರುವ ಗಂಗಾವತಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈಗಾಗಲೇ ಹಲವು ಭತ್ತದ ತಳಿಗಳನ್ನು ಬೆಳೆದು, ಯಶಸ್ವಿಯಾಗಿರುವ ಇಲ್ಲಿನ ಅನ್ನದಾತರು ಇಂಡೋನೇಷ್ಯಾದ ಈ ವಿಭಿನ್ನ RICE FISH ಬೆಳೆಯ ತಂತ್ರಜ್ಞಾನ ಅಳವಡಿಸಿಕೊಂಡು ಯಶಸ್ಸು ಕಾಣಬೇಕಾಗಿದೆ. ಇಡೀ ಜಗತ್ತಿಗೆ ಅಕ್ಕಿ ಸರಬರಾಜುಗೊಳಿಸುವ ಈ ಪ್ರದೇಶದಲ್ಲಿ ಈ ವಿನೂತನ ಪದ್ಧತಿ ಮೂಲಕ ವಿಷ ಮುಕ್ತ ಭತ್ತದ ಬೆಳೆಗಳನ್ನು ಬೆಳೆಯಬೇಕು ಎಂಬುದು ಕೃಷಿ ಪ್ರಿಯ ಪತ್ರಿಕೆಯ ಆಶಯ..!
ವಿನೂತನ ಕೃಷಿಗೆ ಸಂಬಂಧಿಸಿದ ಈ ಕೆಳಗಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿರುವುದು ವಿಶೇಷ..!!
