ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಶ್ರೀ ಗವಿಸಿದ್ಧೇಶ್ವರ ಮಹಾ ಜಾತ್ರೆಯ ಮುನ್ನ ದಿನ ನಡೆಯುವ ಉತ್ಸವ ಯಶಸ್ವಿಯಾಗಿ ಜರುಗಿತು..!

ದೇಶದ ಸುಪ್ರಸಿದ್ಧ ಜಾತ್ರೆಗಳಲ್ಲೊಂದಾದ ಕೊಪ್ಪಳ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಮಠದ ಸಂಪ್ರದಾಯದಂತೆ ಜಾತ್ರೆಯ ಹಿಂದಿನ ದಿನ ನಡೆಯುವ ಉತ್ಸವವು ವಿಜೃಂಭಣೆಯಿಂದ ಜರುಗಿತು. ಮಹಾ ಜಾತ್ರೆಯ ಹಿನ್ನೆಲೆಯಲ್ಲಿ ಈಗಾಗಲೇ ಆಗಮಿಸಿರುವ ಸಾವಿರಾರು ಭಕ್ತರು ಉತ್ಸವಕ್ಕೆ ಸಾಕ್ಷಿಯಾದರು.

ಆಕರ್ಷಕ ರಂಗೋಲಿ : ಮಹಾ ರಥೋತ್ಸವದ ಹಿನ್ನೆಲೆಯಲ್ಲಿ ರಥೋತ್ಸವ ಜರಗುವ ರಥ ಹಾದಿಯಲ್ಲಿ ವಿದ್ಯಾರ್ಥಿಗಳು ಹಾಕಿದ ರಂಗೋಲಿ ಚಿತ್ರಗಳು ಆಕರ್ಷಕವಾಗಿ ಕಂಡು ಬಂದವು. ವಿಶೇಷವಾಗಿ ರಥದ ಮುಂಭಾಗದಲ್ಲಿಯೇ ಹಾಕಿದ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ (ಭಾವೈಕ್ಯತೆ) ಸಂದೇಶ ಸಾರುವ ರಂಗೋಲಿ ಮಾತ್ರ ಜಾತ್ರೆಗೆ ಆಗಮಿಸಿದವರನ್ನು ಕೆಲ ಸಮಯ ಹಿಡಿದಿಟ್ಟಿತು..!!


