ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ವಿಜಯಪುರ (ಕೊಪ್ಪಳ) :
ನಾಡಿನಲ್ಲಿ ನಡೆದಾಡುವ ದೇವರು ಎಂದೇ ಬಿಂಬಿತವಾಗಿರುವ ವಿಜಯಪುರದ ಜ್ಞಾನ ಯೋಗಾಶ್ರಮದ ಮಹಾ ಬೆಳಕು, ಮಹಾಪುರುಷ, ಖ್ಯಾತ ಆಧ್ಯಾತ್ಮ ಪ್ರವಚನಕಾರರು, ವಿರಾಗಿ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು (82) ದಿನಾಂಕ 02-01-2023ರ ರಂದು ಸಂಜೆ 6-5 ನಿಮಿಷಕ್ಕೆ ಅಸ್ತಂಗತರಾದರು..!
ಕಳೆದೊಂದು ತಿಂಗಳಿಂದ ಅವರು ವಯೋಸಹಜ ಖಾಯಿಲೆಗೆ ಒಳಗಾಗಿದ್ದರು. ಭಾನುವಾರ ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿ ಶ್ರೀಗಳೊಂದಿಗೆ ಮಾತನಾಡಿ, ಆರೋಗ್ಯ ವಿಚಾರಿಸಿದ್ದರು. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ನಾಡಿನ ಮಠಾಧೀಶರು ಶ್ರೀಗಳಿಗೆ ಹೆಚ್ಚಿನ ಚಿಕಿತ್ಸೆಕೊಡಿಸಲು ವಿನಮ್ರ ಪೂರಕವಾಗಿ ಮನವಿ ಮಾಡಿದ್ದರೂ ಸಹ ಅಷ್ಟೇ ನಯವಾಗಿ ಸಿದ್ಧೇಶ್ವರ ಶ್ರೀಗಳು ನಿರಾಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಹೊಸ ವರ್ಷದ ಸಂಭ್ರಮದ ಎರಡನೇ ದಿನ ಮಹಾಪುರುಷನನ್ನು ಕಳೆದುಕೊಂಡ ದೇಶ ಸೇರಿದಂತೆ ವಿದೇಶದಲ್ಲಿನ ಅಸಂಖ್ಯಾತ ಭಕ್ತರು ಕಂಬನಿ ಮಿಡಿದಿದ್ದಾರೆ..!


