ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಗವಿಸಿದ್ಧೇಶ್ವರ ಮಹಾರಥೋತ್ಸವಕ್ಕೆ ಈಶ ಫೌಂಡೇಶನ್ ಸದ್ಗುರು ಜಗ್ಗಿ ವಾಸುದೇವ ಅವರು ಚಾಲನೆ ನೀಡಿದರು..!


ಕೊರೋನಾ ವೈರಸ್ ಹರಡುವ ಹಿನ್ನಲೆಯಲ್ಲಿ ಕಳೆದ ಎರಡು ವರ್ಷ ಸಾಂಕೇತಿಕವಾಗಿ ಗವಿಸಿದ್ದೇಶ್ವರ ಜಾತ್ರೆ ನಡೆಸಲಾಗಿತ್ತು. ಆದರೆ, ಈ ವರ್ಷ ಲಕ್ಷಾಂತರ ಭಕ್ತರ ಮಧ್ಯೆ ಜರುಗಿದ ಮಹಾ ರಥೋತ್ಸವದ ವೈಭವ ಎರಡು ಕಣ್ಣು ಸಾಲಲಿಲ್ಲ. ಶ್ರೀ ಗವಿಸಿದ್ಧೇಶ್ವರ ಮಹಾರಾಜಕೀ.. ಜೈ ಎಂಬ ಮುಗಿಲು ಮುಟ್ಟಿದ ಜಯ ಘೋಷಣೆಯೊಂದಿಗೆ ಆರಂಭವಾದ ಮಹಾ ರಥೋತ್ಸವ ನಮ್ಮ ಹೆಮ್ಮೆಯ ಸಂಕೇತ. ಸೇರಿದ ಲಕ್ಷಾಂತರ ಭಕ್ತರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡಬೇಕಾಗಿತು. ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಸೇರಿದಂತೆ ಹರಗುರುಚರಮೂರ್ತಿಗಳು, ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಮಹಾ ರಥೋತ್ಸವಕ್ಕೆ ಸಾಕ್ಷಿಯಾದರು..!!
ಎರಡು ನಿಮಿಷ ಮೌನಾಚರಣೆ : ವಿಜಯಪುರದ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಮಹಾ ಜಾತ್ರೆಯಲ್ಲಿ ಸಾಗಿದ ರಥೋತ್ಸವ ನಿಲ್ಲಿಸಿ ಎರಡು ನಿಮಿಷಗಳ ಕಾಲ ಮೌನಾಚರಣೆ ಕೈಗೊಳ್ಳಲಾಗಿತು..!
