ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಬಾಗಲಕೋಟೆ : ಜಿಲ್ಲೆಯ ಇಲಕಲ್ ತಾಲೂಕಿನ ಸಿದ್ಧನಕೊಳ್ಳದ ನಿರಂತರ ದಾಸೋಹ ಮತ್ತು ಕಲಾ ಪೋಷಕರ ಮಠದಲ್ಲಿ ಜರುಗಿದ ಮಹಾ ಜಾತ್ರೆಯಲ್ಲಿ ರಥೋತ್ಸವದ ಸಡಗರವು ಸಂಭ್ರಮದಿಂದ ಜರುಗಿತು..!
ರಥೋತ್ಸವದ ಮುನ್ನ ಮಠದ ಶ್ರೀ ಡಾ.ಶಿವಕುಮಾರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬಿಜೆಪಿ ರಾಷ್ಟ್ರೀಯ ಮುಖಂಡರು ಹಾಗೂ ಅಖಿಲ ಭಾರತ ಸನಾತನ ಧರ್ಮ ಜಾಗರಣ ಮಂಚ್ ನ ಐಟಿ ಸೆಲ್ ಮುಖ್ಯಸ್ಥ ಡಾ.ಆರ್.ಎಸ್.ರಾಜು ದಂಪತಿ ಹೆಲಿಕಾಪ್ಟರ್ ಮೂಲಕ ರಥೋತ್ಸವಕ್ಕೆ ಪುಷ್ಪಾರ್ಚಣೆ ಮೂಲಕ ಚಾಲನೆ ನೀಡಿದರು.
ಕೇವಲ ದಾಸೋಹಕ್ಕೆ ಸೀಮಿತವಾಗಿರದ ಮಠವು ಸಾಕಷ್ಟು ಜನ ಕಲಾವಿದರ ಬೆಳಕಿಗೆ ಕಾರಣವಾಗಿದೆ. ಇಲ್ಲಿನ ಶ್ರೀಗಳು ಭಕ್ತರಿಗೆ ನೀಡುವ ಆಶೀರ್ವಾದ ಜೊತೆಗೆ ತಮಗಿಷ್ಟಕ್ಕೆ ಬಂದಂತೆ ಹಣವನ್ನು ಆಶೀರ್ವಾದ ರೂಪದಲ್ಲಿ ನೀಡುವುದು ವಿಶೇಷತೆ. ಮೂರು ದಿನಗಳ ಕಾಲ ಜರಗುವ ಶ್ರೀ ಸಿದ್ಧಶ್ರೀ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಚಲನಚಿತ್ರೋತ್ಸವದಲ್ಲಿ ನಾಡಿನ ಹೆಸರಾಂತ ಚಲನಚಿತ್ರ ನಟ ನಟಿಯರು ಭಾಗವಹಿಸಲಿದ್ದಾರೆ. ಹೆಲಿಕಾಪ್ಟರ್ ಮೂಲಕ ಕೈಗೊಂಡ ಪುಷ್ಪಾರ್ಚಣೆಯನ್ನು ಲಕ್ಷಾಂತರ ಜನ ಭಕ್ತರು ಕಣ್ಣು ತುಂಬಿಕೊಂಡರು..!!

