ಕಾಂಗ್ರೆಸಿನ ಕೃಷ್ಣಾ ನಡೆ ಆಂದ್ರಾ ಕಡೆ ಆಗಿದೆ : ಕುಮಾರಸ್ವಾಮಿ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಕಾಂಗ್ರೆಸ್ ಪಕ್ಷ ಈ ಹಿಂದೆ ಕೈಗೊಂಡಿದ್ದ “ಕಾಂಗ್ರೆಸ್ ನಡೆ ಕೃಷ್ಣಾ ಕಡೆಗೆ” ಆಗಲಿಲ್ಲ.. ಅದು, ಕಾಂಗ್ರೆಸ್ ಪಕ್ಷದ ನಡೆ ಆಂದ್ರಪ್ರದೇಶದ ಕಡೆ ಆಗಿತು ಅವರು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಟುವಾಗಿ ಟೀಕಿಸಿದರು..!

ಅವರು ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಜೆ.ಡಿ.ಎಸ್ ಪಕ್ಷ ಹಮ್ಮಿಕೊಂಡಿದ್ದ “ಪಂಚರತ್ನ ರಥ ಯಾತ್ರೆ” ಬೃಹತ್ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಜೆ.ಡಿ.ಎಸ್ ಪಕ್ಷ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ.. ಕೃಷಿಕರಿಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರೈತರ ಪರವಾಗಿ ವಿಶೇಷವಾಗಿ ಪಂಚ ರತ್ನಗಳ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಪಕ್ಷ ಬೆಂಬಲಿಸಿ ಎಂದು ಮತದಾರರಿಗೆ ಮನವಿ ಮಾಡಿಕೊಂಡರು. ರಾಷ್ಟ್ರೀಯ ಎರಡು ಪಕ್ಷಗಳು ಜನ ಸೇವೆಯಲ್ಲಿ ವಿಫಲಗೊಂಡಿವೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ.. ರೈತರ ಉಳಿಯುವಿಗಾಗಿ ಸಾಲ ಮನ್ನಾ ಮಾಡುವ ಭರವಸೆ ನೀಡಿದರು. ಬಿತ್ತನೆಗೆ ಎಕರೆಗೆ ಹತ್ತು ಸಾವಿರ ರೂಪಾಯಿಗಳಿಂದ ಹಿಡಿದು, ಲಕ್ಷ ರೂಪಾಯಿಗಳವರೆಗೆ ಸಹಾಯಧನದ ರೂಪದಲ್ಲಿ ಒದಗಿಸುವುದಾಗಿ ಅಲ್ಲದೆ, ಬಡ ಕುಟುಂಬಗಳಿಗೆ, ಮಹಿಳೆಯರಿಗೆ, ಹಿಂದುಳಿದಿರುವರಿಗೆ ನೆರವು ನೀಡುವುದಾಗಿ ಕುಮಾರಸ್ವಾಮಿ ಸವಾಲ್ ಹಾಕಿದರು. ಜಿಲ್ಲಾಧ್ಯಕ್ಷ ವೀರೇಶ ಮಹಾಂತಯ್ಯನಮಠ, ಮಾಜಿ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ ವಕೀಲರು, ಮುಖಂಡರಾದ ಸಿ.ಎಂ. ಹಿರೇಮಠ, ರಾಜ್ಯ ಕಾರ್ಯಕಾರಿಣಿ ಸದಸ್ಯ ಶರಣಪ್ಪ ಕುಂಬಾರ, ತಾಲೂಕಾ ಅಧ್ಯಕ್ಷ ನಾಗರಾಜ ತಳವಾರ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು..!!