ಹನುಮನಾಳದಲ್ಲಿ ಸಡಗರದಿಂದ ಜರುಗಿದ ಕಲಿಕಾ ಹಬ್ಬ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳದಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವು ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು..!

ಕಲಿಕಾ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಜಾಥಾಕ್ಕೆ ಚಾಲನೆ ನೀಡಿದ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಂತಮ್ಮ ಲೆಂಕಪ್ಪ ಸಾಂತಗೇರಿ ಮಾತನಾಡಿ, ಮಕ್ಕಳು ಕಲಿಕಾ ಹಬ್ಬದ ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ಕಲಿಕೆಯ ಕುರಿತಾದ ವಿವಿಧ ಶೈಕ್ಷಣಿಕ ಸಂದೇಶ ಸಾರುವ ಪೇಟಾ ಧರಿಸಿದ ಶಿಕ್ಷಕರು ಸೇರಿದಂತೆ ಮುಖ್ಯ ಅತಿಥಿಗಳು ಸಂಭ್ರಮ ಪಟ್ಟಿದ್ದು ಹಬ್ಬದ ವಿಶೇಷವಾಗಿತ್ತು. ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯಗಳ ಮೂಲಕ ಜಾಥಾ ಕೈಗೊಳ್ಳಲಾಗಿತ್ತು.
ನಿವೃತ್ತ ಪ್ರಾಚಾರ್ಯ ಕೆ.ಬಿ.ತಳವಾರ, ಶಿಕ್ಷಣ ಸಂಯೋಜಕ ಶಿವಾನಂದ ಪಂಪಣ್ಣವರ, ಎಸ್.ಡಿ.ಎಂ.ಸಿ ಅಧ್ಯಕ್ಷ ಶಿವರುದ್ರಯ್ಯ ನಿಜಗುಣಯ್ಯ ಹಿರೇಮಠ, ಮುಖಂಡರಾದ ಸಂತೋಷ ಕಂಚೇರ, ವೀರಣ್ಣ ಮಾನಪ್ಪ ಬಡಿಗೇರ, ಶಿಕ್ಷಕ ಯರಿಸ್ವಾಮಿ, ಸಿ.ಆರ್.ಪಿ ಶರಣಗೌಡ ಗೌಡರ, ವಿಠ್ಠಲ ಪತ್ತಾರ, ಮುಖ್ಯಶಿಕ್ಷಕ ಹನುಮಂತಪ್ಪ ಮಾಲಗಿತ್ತಿ, ಮಲ್ಲಿಕಾರ್ಜುನ ಮ್ಯಾಗೇರಿ ಸೇರಿದಂತೆ ಕ್ಲಸ್ಟರ್ ನ ಎಲ್ಲಾ ಮುಖ್ಯ ಗುರುಗಳು, ಸಂಪನ್ಮೂಲ ವ್ಯಕ್ತಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ಶಾಲಾ ಸಮಿತಿ ಸದಸ್ಯರು, ಗ್ರಾಮಸ್ಥರು, ವಿದ್ಯಾರ್ಥಿಗಳು ಕಲಿಕಾ ಹಬ್ಬದಲ್ಲಿ ಭಾಗವಹಿಸಿದ್ದರು..!!