ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಖಗೋಳಶಾಸ್ತ್ರ ಪ್ರಿಯರಿಗೊಂದು ಒಳ್ಳೆಯ ಸುದ್ದಿ. ಫೆಬ್ರವರಿ 1 ಮತ್ತು 2 ರಂದು ಬೆಳಿಗ್ಗೆ 3 ಗಂಟೆ ಸುಮಾರಿಗೆ ಭೂಮಿಗೆ ಅತ್ಯಂತ ಸಮೀಪದಲ್ಲಿಯೇ ‘ಹಸಿರು ಧೂಮಕೇತು’ ಕಾಣಲಿದೆ. ಇದನ್ನು ವೀಕ್ಷಿಸಿ ಕಣ್ತುಂಬಿಕೊಳ್ಳಬಹುದಾಗಿದೆ..!
ಪ್ರತಿ 50 ಸಾವಿರ ವರ್ಷಗಳಿಗೊಮ್ಮೆ ಕಾಣುವ ಈ ವಿಶಿಷ್ಟ ಧೂಮಕೇತು ಉತ್ತರ ಭಾಗದಲ್ಲಿ ಕಾಣಿಸಿಕೊಳ್ಳಲಿದೆ. ಇದನ್ನು ಬರಿಗಣ್ಣಿನಿಂದ ನೋಡಬಹುದಾಗಿದೆ ಎಂದು ಬಾಗಲಕೋಟೆಯ ಬಸವೇಶ್ವರ ಮಹಾವಿದ್ಯಾಲಯದ ವಿಜ್ಞಾನ ಸಂಘವು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ಇಂತಹ ವೈಶಿಷ್ಟ್ಯತೆಯ ಧೂಮಕೇತು ನೀಲಿ ಆಕಾಶದಲ್ಲಿ ಬಹಳಷ್ಟು ವಿಭಿನ್ನವಾಗಿರಲಿದೆ. ಸೌರವ್ಯೂಹದ ಆಚೆಗಿರುವ ಊರ್ತ ಕ್ಲೌಡ್ ನಿಂದ ಬಂದಿರುವುದರಿಂದ ಇದನ್ನು “ಹಸಿರು ಧೂಮಕೇತು” ಎಂದು ಕರೆಯಲಾಗುತ್ತಿದೆ. ಭೂಮಿಯಿಂದ 16 ಕೋಟಿ ಕಿ.ಮೀ ಧೂರದಲ್ಲಿದ್ದ ಧೂಮಕೇತು ಈ ಸಧ್ಯ ಸುಮಾರು 4 ಕೋಟಿ ಕಿ.ಮೀ ನಷ್ಟು ಸಮೀಪ ಕಾಣಿಸುವುದೇ ವಿಶೇಷವಾಗಿದೆ. ಮತ್ತೇಕೆ ತಡ ವಿಶೇಷ ಧೂಮಕೇತು ನೋಡಿ ಆನಂದಿಸಿರಿ..!!

