ಪಿಡಿಓ ಮೂಲ ದಾಖಲೆಗಳನ್ನು ಬಹಿರಂಗಪಡಿಸಬೇಕು..!?

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ತಳುವಗೇರಾ ಗ್ರಾಮ ಪಂಚಾಯಿತಿ ಪಿಡಿಓ ಅವರು ನ್ಯಾಯಕ್ಕಾಗಿ ಅಹೋರಾತ್ರಿ ಧರಣಿ ನಿರತ ಕುಟುಂಬದ ಆಸ್ತಿಗೆ ಸಂಬಂಧಿಸಿದ ಪಂಚಾಯಿತಿಯಲ್ಲಿನ ಮೂಲ ದಾಖಲೆಗಳನ್ನು ಬಹಿರಂಗಪಡಿಸಬೇಕೆಂದು ಗ್ರಾಮಸ್ಥರು ಸೇರಿದಂತೆ ನೊಂದ ಕುಟುಂಬವು ಒತ್ತಾಯಿಸಿದೆ..!

ಮನೆ ಮುಂದಿನ ಖಾಲಿ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆಗೆ ಒತ್ತಾಯಿಸಿ ತಳುವಗೇರಾ ಗ್ರಾಮದ ಹಿರಗಣ್ಣನವರ ಕುಟುಂಬದ ಸದಸ್ಯರು ಪಂಚಾಯಿತಿ ಮುಂಭಾಗದಲ್ಲಿ ನ್ಯಾಯಕ್ಕಾಗಿ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು. ಆದರೆ, ಕುಟುಂಬಕ್ಕೆ ಇಲ್ಲಿಯವರೆಗೂ ನ್ಯಾಯ ಮಾತ್ರ ದೊರಕಲಿಲ್ಲ. ಪಂಚಾಯಿತಿ ಆಸ್ತಿ ನಂ : 183 ಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಿಭಾಗಗಳನ್ನು ಮಾಡಲಾಗಿದೆ. 2004 ರಲ್ಲಿ ಯಾವುದೇ ದಾಖಲೆಗಳು ಇಲ್ಲದೆ, ಸಂಬಂಧವಿಲ್ಲದವರ ಹೆಸರಿಗೆ ವಿಭಾಗ ಮಾಡಲಾಗಿದೆ. ಕಡತದ ಮಧ್ಯದಲ್ಲಿ ಏಕಾಏಕಿಯಾಗಿ ಆಸ್ತಿ ಸೃಷ್ಟಿಮಾಡಿರುವ ಸ್ಪಷ್ಟ ಮಾಹಿತಿ ಪತ್ರಿಕೆ ಲಭ್ಯವಾಗಿದೆ. ಕೂಡಲೇ ಪಂಚಾಯಿತಿ ಪಿಡಿಓ ಅವರು ವ್ಯಾಜ್ಯದಲ್ಲಿರುವ ಆಸ್ತಿ ಹೇಗೆ..? ಭಾಗವಾಗಿತು. ಭಾಗವಾಗಲು ಯಾವ ದಾಖಲೆಗಳನ್ನು ಬಳಸಿದ್ದಾರೆ. ಖರೀದಿ ಪತ್ರ ಮೂಲಕ ಮುಟೇಶನ್ ಆಗಿತಾ..? ಅಥವಾ ಆಸ್ತಿ ವರ್ಗಾವಣೆಗೆ ಸಲ್ಲಿಸಿದ ದಾಖಲೆಗಳಿಗೆ ಸಹಿ ಇತ್ಯಾದಿ ಅಡಕ ದಾಖಲೆಗಳು ಸಮೇತ ಮಾಹಿತಿಯನ್ನು ಪಂಚಾಯಿತಿ ಪಿಡಿಓ ಬಹಿರಂಗಪಡಿಸಬೇಕಾಗಿರುವುದು ಬಾಕಿ ಇದೆ..!!

ಡಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ : ಹೈದ್ರಾಬಾದ್ ನಿಜಾಮರ ಕಾಲದಿಂದ ಹೊಂದಿದ ನಮ್ಮ ಆಸ್ತಿಯನ್ನು 2004 ರಲ್ಲಿ ಯಾವುದೇ ಪುರಾವೆಗಳು ಇಲ್ಲದೆ ವಿಭಾಗ ಮಾಡಲಾಗಿದೆ. ನನ್ನ ಕುಟುಂಬಕ್ಕೆ ಅನ್ಯಾವಾಗಿದೆ. ಮೂಲ ದಾಖಲೆಗಳನ್ನು ಪಿಡಿಓ ಅವರು ಕೂಡಲೇ ಬಹಿರಂಗಪಡಿಸದಿದ್ದರೆ.. ನ್ಯಾಯಕ್ಕಾಗಿ ಇಡೀ ಕುಟುಂಬದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದು ಪತ್ರಿಕೆಗೆ ನೊಂದ ಕುಟುಂಬದ ಸದಸ್ಯೆ ಅಂಬಿಕಾ ಎಚ್ಚರಿಕೆ ನೀಡಿದ್ದಾರೆ..!