ಅಣ್ಣನನ್ನು ಕೊಲೆಗೈದ ತಮ್ಮ..!

 

ಕೃಷಿ ಪ್ರಿಯ ನ್ಯೂಸ್ |

ಶರಣಪ್ಪ ಕುಂಬಾರ

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಪಟ್ಟಲಚಿಂತಿ ಗ್ರಾಮದ ಸಹೋದರರ ಕಲಹಕ್ಕೆ ಅಣ್ಣನು ಕೊಲೆಯಾಗಿರುವ ಘಟನೆ ಜರುಗಿದೆ..!

ಯಮನೂರಪ್ಪ ಬಸಪ್ಪ ಕಡಿವಾಲರ (39) ಎಂಬ ಮೃತ ನತದೃಷ್ಟ. ಸಾಯಂಕಾಲ ಸುಮಾರಿಗೆ ಅಣ್ಣನನ್ನು ಕೆಲಸದ ನೆಪವೊಡ್ಡಿ ತಮ್ಮನು ಕರೆದು, ಮನೆವೊಳಗಿನ ಸ್ನಾನದ ರೂಮಿನಲ್ಲಿ ಚಾಕುವಿನಿಂದ ಕೊಲೆಗೈದಿರುವುದು ತಿಳಿದು ಬಂದಿದೆ. ಅಪರಾದಿ ಮಲ್ಲಪ್ಪ ಬಸಪ್ಪ ಕಡಿವಾಲರ (30) ಅವರನ್ನು ಹನುಮಸಾಗರ ಪೊಲೀಸರು ಬಂದಿಸಿ, ವಿಚಾರಣೆಗೆ ಠಾಣೆಗೆ ಕರೆದುಕೊಂಡು ಹೋಗಿರುವ ಬಗ್ಗೆ ಗ್ರಾಮಸ್ಥರು ಪತ್ರಿಕೆಗೆ ತಿಳಿಸಿದ್ದಾರೆ. ಕೊಲೆಗೆ ಪಕ್ಕಾ ಕಾರಣ ತಿಳಿದು ಬಂದಿಲ್ಲ..!!