ದಿ ವಿಜಡಮ್ ಸ್ಕೂಲ್ ನಲ್ಲಿ ಕ್ರೀಡಾಕೂಟ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೋಗಲ್ ದಿ ವಿಜಡಮ್ ಸ್ಕೂಲ್ ನಲ್ಲಿ ದಿನಾಂಕ 13-02-2023 ರಂದು ಜರಗುವ ಶಾಲಾ ವಾರ್ಷಿಕೋತ್ಸವ ಸಮಾರಂಭದ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ವಿಶೇಷ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು..!

ಸಂಸ್ಥೆಯ ಕಾರ್ಯದರ್ಶಿ ಶಂಭು ಹಿರೇಮಠ ಕ್ರೀಡಾಕೂಟಕ್ಕೆ ಕ್ರೀಡಾ ಜ್ಯೋತಿ ಬೆಳಗುವುದರ ಮೂಲಕ ಚಾಲನೆ ನೀಡಿ, ಮಕ್ಕಳ ಕ್ರೀಡಾಭಿಮಾನ ಬೆಳಿಸಬೇಕಾಗಿದೆ. ಕ್ರೀಡೆಗಳ ಪ್ರೋತ್ಸಾಹಕ್ಕೆ ಪಾಲಕರ ಸಹಕಾರ ಅತ್ಯಗತ್ಯವಾಗಿದೆ. ಇಂದಿನ ದಿನಮಾನಗಳಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಿ ಸ್ಥಾನಮಾನಗಳನ್ನು ಗಳಿಸುವುದರಿಂದ ಹಲವು ಇಲಾಖೆಗಳಲ್ಲಿ ಮೀಸಲಾತಿ ಸೌಲಭ್ಯಗಳಿವೆ ಎಂದು ಶಂಭು ಹಿರೇಮಠ ಅವರು ಸಲಹೆ ನೀಡಿದರು.

100 ಮೀಟರ್ ಓಟ ಸೇರಿದಂತೆ ಹಲವು ಕ್ರೀಡಾಕೂಟಗಳು ಜರುಗಿದವು. ಕ್ರೀಡಾಕೂಟದಲ್ಲಿ ಭಾಗವಹಿಸಿ, ಸ್ಥಾನಗಳನ್ನು ಗಳಿಸಿದ ಕ್ರೀಡಾಪಟುಗಳಿಗೆ ದಿನಾಂಕ 13-02-2023 ರಂದು ಜರಗುವ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪಾರಿತೋಷಕಗಳನ್ನು ವಿತರಿಸಲಾಗುವುದು ಎಂದು ಮುಖ್ಯ ಗುರು ಅಂಗಡಿ ತಿಳಿಸಿದ್ದಾರೆ.

ಶಿಕ್ಷಕರಾದ ಲಕ್ಷೀ ಕುರಟ್ಟಿ, ಆಫ್ರಿನ ಮುಚ್ಚಾಲಿ, ರೇಷ್ಮಾ ಭಾಗವಾನ, ಮಹೇಶ ಗಟ್ಟಿ, ರಾಜಮ ಯಾದವಾಡ, ಶಶಿಕಲಾ ಹಿರೇಮಠ, ವಾಹನ ಸಿಬ್ಬಂದಿ ಫಕೀರಪ್ಪ ಮಂಡಗಿ, ಚಂದ್ರಶೇಖರ್ ಯಲಿಗಾರ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು..!!