ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಜ್ |
ಕೊಪ್ಪಳ (ವಿಜಯಪುರ) : ಕಾರ್ಯನಿರತ ಪತ್ರಕರ್ತರ ಸಂಘವು ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ 37 ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದ ಮೊದಲ ದಿನದ ರಾತ್ರಿ ಹಮ್ಮಿಕೊಂಡಿದ್ದ ಸಂಗೀತ ಕಾರ್ಯಕ್ರಮಗಳು ಜನಮನ ಸೂರೆಗೊಂಡವು..!
ವಿಜಯಪುರದ ನಡೆದಾಡುವ ದೇವರಾಗಿದ್ದ ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ಕುರಿತು ಮೈಸೂರಿನ ಕೆ.ಸಿ. ಶಿವಪ್ಪ ಅವರ ಚೌಪದಿ ರಚನೆಯ “ಸಂತನೆಂದರೆ ಯಾರು… ದಿವ್ಯತೆ ಅರಿತವನು” ಹಾಡಿಗೆ ಕಲಾವಿದೆಯ
ನೃತ್ಯ ಕಲೆಯು ರಸಿಕರ ಕಣ್ಣನ್ನು ತೇವಗೊಳಿಸಿತು. ಕಾರ್ಯಕ್ರಮ ನೀಡಿದ ಕಲಾವಿದರಿಗೆ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಸಿ.ಲೋಕೇಶ್ ಪ್ರಮಾಣ ಪತ್ರ ನೀಡಿ, ಸತ್ಕರಿಸಿದರು..!!
