ಬೆಂಕಿಗೆ ಬಣವಿ ಬಸ್ಮ

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಕೊಡತಗೇರಿ ಗ್ರಾಮದ ಜಮೀನಿನಲ್ಲಿರುವ ಮೇವಿನ ಬಣವಿವೊಂದು ಆಕಸ್ಮಿಕ ಬೆಂಕಿಗೆ ಬಸ್ಮವಾಗಿರುವ ಘಟನೆ ಜರುಗಿದೆ..!

ನೀಲಪ್ಪ ಮಲ್ಲಪ್ಪ ದ್ಯಾವಣ್ಣವರ ಎಂಬ ರೈತನಿಗೆ ಬಣವಿ ಸೇರಿದ್ದಾಗಿದೆ. ಜಾನುವಾರುಗಳಿಗೆ ವರ್ಷವಿಡೀ ಕೂಡಿಟ್ಟಿದ್ದ ಅಂದಾಜು 25 ಸಾವಿರ ರೂಪಾಯಿಗಳ ಮೌಲ್ಯದ ಮೇವು ಬೆಂಕಿ ಪಾಲಾಗಿದ್ದರಿಂದ ರೈತ ಕಂಗಾಲಾಗಿದ್ದಾನೆ. ಸೂಕ್ತ ಪರಿಹಾರಕ್ಕಾಗಿ ಸರಕಾರವನ್ನು ಗ್ರಾಮಸ್ಥರು ಸೇರಿದಂತೆ ರೈತ ಒತ್ತಾಯಿಸಿದ್ದಾನೆ..!!