ದಿ ವಿಜಡಮ್ ಶಾಲೆಯಲ್ಲಿ ವಾರ್ಷಿಕೋತ್ಸವ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದ ದಿ ವಿಜಡಮ್ ಶಾಲೆಯಲ್ಲಿ ದಿನಾಂಕ 13-02-2023 ರಂದು ‘6 ನೇ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ -2023’ ಹಮ್ಮಿಕೊಳ್ಳಲಾಗಿದೆ..!

ಅಂದು ಸಾಯಂಕಾಲ 4 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಭೈರನಟ್ಟಿಯ ಶ್ರೀ ಶಾಂತಲಿಂಗ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸಲಿದ್ದಾರೆ. ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಕಾರ್ಯಕ್ರಮ ಉದ್ಘಾಟಿಸುವರು. ಶ್ರೀ ಕುಮಾರಸ್ವಾಮಿ ಹಿರೇಮಠ ಜ್ಯೋತಿ ಬೆಳಗಿಸುವರು. ಶ್ರೀ ಶರಣಯ್ಯ ಹಿರೇಮಠ ಅಧ್ಯಕ್ಷತೆವಹಿಸಲಿದ್ದಾರೆ. ನರಗುಂದ ತಾಲೂಕಿನ ವಾಸನದ ಖ್ಯಾತ ಆರ್ಯುವೇದ ವೈದ್ಯರು ಹಾಗೂ ಸಾವಯವ ಕೃಷಿಕರಾದ ಡಾ.ಹನುಮಂತ ಮಳಲಿ, ಬಾದಾಮಿಯ ಶಿವಬಸಮ್ಮ ಪಟ್ಟಣಶೆಟ್ಟಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಕುಮಾರಿ ಶೀತಲ ಎಸ್ ಪಟ್ಟಣಶೆಟ್ಟಿ, ಸಿ.ಆರ್.ಪಿ ವಿಠ್ಠಲ್ ಪತ್ತಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಹೈದರ ಅಲಿ ಜಾಲಿಹಾಳ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಶಂಭು ಹಿರೇಮಠ ತಿಳಿಸಿದ್ದಾರೆ..!!