ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಅತಿಯಾದ ಮೊಬೈಲ್ ಬಳಕೆಯಿಂದ ಕಣ್ಣಿನ ಕ್ಯಾನ್ಸರ್ ನಿಂದ ಬಳಲಬೇಕಾಗುತ್ತದೆ ಎಂದು ನರಗುಂದ ತಾಲೂಕಿನ ವಾಸನದ ಖ್ಯಾತ ಪಾರಂಪರಿಕ ಆರ್ಯುವೇದಿಕ ವೈದ್ಯ ಡಾ.ಹನುಮಂತ ಮಳಲಿ ಅವರು ಎಚ್ಚರಿಕೆ ಸಂದೇಶ ನೀಡಿದರು..!

ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದ ದಿ ವಿಜಡಮ್ ಶಾಲೆಯ 6 ನೇ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದರು. ಆಟವಾಡಲು ಮಕ್ಕಳ ಕೈಯಲ್ಲಿ ಮೊಬೈಲ್ ನೀಡಬೇಡಿ, ಮೊಬೈಲ್ ನ ಹಾನಿಕಾರಕ ತರಂಗಗಳಿಂದ ಕಣ್ಣು ಅಲ್ಲದೆ, ಮೆದುಳಿನ ಮೇಲೆ ಪರಿಣಾಮ ಬೀರಿದ ಮಗುವೊಂದರ ಉದಾಹರಣೆ ಸಮೇತ ವಿವರಿಸಿದರು. ಪ್ಲಾಸ್ಟಿಕ್ ಬಳಕೆಯಿಂದ ಭೂಮಿ ಇಂದು ವಿಷವಾಗುತ್ತಿದೆ. ಪವಿತ್ರ ಮಣ್ಣು ಅಪಾಯ ಹಂತ ತಲುಪಿದ್ದಾಗಿದೆ. ಇನ್ನಾದರು ಎಚ್ಚತ್ತುಕೊಂಡು, ಪ್ಲಾಸ್ಟಿಕ್ ಬಳಕೆಯ ನಿಯಂತ್ರಣ ಖಂಡಿತ ಕಡಿಮೆಯಾಗಬೇಕಾಗಿದೆ ಎಂದರು. ಶಾಲೆಗಳಲ್ಲಿ ಮೌಲ್ಯ ಶಿಕ್ಷಣ ಅಳವಡಿಸಿಕೊಳ್ಳಬೇಕಾಗಿದೆ. ಸರ್ವಾಂಗೀಣ ಶಿಕ್ಷಣದ ಕಡೆಗೆ ಹೆಚ್ಚು ಒತ್ತುಕೊಡಬೇಕಾಗಿದೆ ಎಂದರು. ಇತ್ತೀಚಿನ ಕಾರ್ಯಕ್ರಮಗಳಲ್ಲಿ ವಿತರಿಸುವ ಅನ್ನವನ್ನು ಹಾಳು ಮಾಡುವುದು ಕಂಡು ಬರುತ್ತಿದೆ. ಅನ್ನ ಹಾಳಾದರೆ.. ಅನ್ನವನ್ನು ಬೆಳೆದ ಅನ್ನದಾತನಿಗೆ ಅಗೌರವ ಮಾಡಿದಂತಾಗುತ್ತದೆ ಈ ಕಾರ್ಯ ಸಮಾಜದಲ್ಲಿ ನಡೆಯಬಾರದು ಎಂದು ಸಲಹೆ ನೀಡಿದರು. ದಿ ವಿಜಡಮ್ ಶಾಲೆ ಪ್ರಗತಿಯತ್ತ ಸಾಗುವ ಲಕ್ಷಣಗಳ ಜೊತೆಗೆ ರಚನಾತ್ಮಕ ಶಿಕ್ಷಣ ನೀಡುವಲ್ಲಿ ದಾಪುಗಾಲು ಇಡುತ್ತಿದೆ ಎಂದರು. ಬಾದಾಮಿಯ ಮುಖ್ಯೋಪಾಧ್ಯಾಯಿನಿ ಶೀತಲ್ ಪಟ್ಟಣಶೆಟ್ಟಿ ಹಾಗೂ ಶಿಕ್ಷಕ ಹೈದರಲಿ ಜಾಲಿಹಾಳ ಮಾತನಾಡಿದರು.

ಭೈರನಟ್ಟಿಯ ಶಾಂತಲಿಂಗ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಶರಣಯ್ಯ ಹಿರೇಮಠ ಅಧ್ಯಕ್ಷತೆವಹಿಸಿದ್ದರು.

ಕುಮಾರಸ್ವಾಮಿ ಹಿರೇಮಠ ಜ್ಯೋತಿ ಬೆಳಗಿಸಿದರು. ಸಂಸ್ಥೆಯ ಕಾರ್ಯದರ್ಶಿ ಶಂಭು ಹಿರೇಮಠ, ಬಸವರಾಜ ಹಿರೇಮಠ, ಶಾಲೆಯ ಮುಖ್ಯಗುರು ಗುರುರಾಜ ಅಂಗಡಿ, ಮುಖಂಡರಾದ ಶಿವನಗೌಡ ಮಾಲಿಪಾಟೀಲ್,

ಮಹಾಂತೇಶ ಶೆಟ್ಟರ್, ಸಂಗಪ್ಪ ಕುಂಬಾರ, ಯಮನೂರಪ್ಪ ಗಾಜಿ, ದ್ಯಾಮನಗೌಡ ಮಾಲಿ ಪಾಟೀಲ್, ಪರಶುರಾಮ ಅರಹುಣಸಿ, ಸಿದ್ದು ಪೊಲೀಸ್, ಅಮರಪ್ಪ ಪಿಡ್ರಾವತಾರ, ಎಸ್.ಡಿ.ಎಂ.ಸಿ.ಅಧ್ಯಕ್ಷ ಮಲ್ಲಪ್ಪ ಕುಂಬಾರ, ಕಾಶಿಂಸಾಬ್ ಗೊಲ್ಲಾಬಾಯಿ, ಗೋಪಾಲ ನಾಯಕ್, ಹೂವಪ್ಪ ಪಿಡ್ರಾವತಾರ ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗ, ಮಕ್ಕಳು ಭಾಗವಹಿಸಿದ್ದರು.

ಶಿಕ್ಷಕ ಬಸವರಾಜ ದಾಸರ ಅವರ ತಂಡದವರು ಸಂಗೀತ ಸೇವೆ ನೀಡಿದರು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಿಕ್ಷಕಿ ಅಫ್ರೀನಾ ಮುಚ್ಚಾಲಿ ಕಾರ್ಯಕ್ರಮ ನಡೆಸಿಕೊಟ್ಟರು..!!






