‘ಚಿಣಿ’ ಮುಂದಿನ ನಡೆ..?

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಬಯಸಿ ಇತ್ತೀಚಿಗೆ ಟಿಕೆಟ್ ಗೆ ಅರ್ಜಿ ಸಲ್ಲಿಸಿ, ಕ್ಷೇತ್ರ ಸೇರಿದಂತೆ ಜಿಲ್ಲೆಯಾದ್ಯಂತ ರಾಜಕೀಯ ವಲಯದಲ್ಲಿ ಸಾಕಷ್ಟು ಗುಲ್ಲು ಎಬ್ಬಿಸಿದ್ದ ನಿವೃತ್ತ ಅಧಿಕಾರಿ ‘ಪ್ರಭಾಕರ ಚಿಣಿ’ ಏಕಾ ಏಕೀ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವುದು ಮುಂದಿನ ನಡೆಯ ಬಗ್ಗೆ ಕುತೂಹಲ ಮೂಡಿಸಿದೆ..!

ಕಾಂಗ್ರೆಸ್ ಗೆ ಗುಡ್ ಬಾಯ್ ಹೇಳಿದ ‘ಚಿಣಿ’.‌.!

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೆ ಒಂದು ಸುತ್ತಿನ ಮಾತುಕತೆ ನಡೆಸುವ ಮೂಲಕ ಪ್ರಭಾಕರ ಚಿಣಿ ನೇರವಾಗಿ ರಾಜೀನಾಮೆ ಪತ್ರ ಸಲ್ಲಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ‘ಉಪ್ಪಾರ’ ಸಮಯದಾಯ ಹೆಚ್ಚಿರುವ ಕಾರಣದಿಂದ ಅದೇ ಸಮುದಾಯದ ಚಿಣಿ ಅವರಿಗೆ ಈ ಬಾರಿ ಕಾಂಗ್ರೆಸ್ ಪಕ್ಷದ ಟಿಕೆಟ್ ಲಭಿಸುತ್ತದೆ. ಜಯವು ಕೂಡಾ ನಿಶ್ಚಿತ ಎಂಬ ಭರವಸೆಯಲ್ಲಿದ್ದ ಚಿಣಿಯ ಅಭಿಮಾನಿಗಳಲ್ಲಿ ನಿರುತ್ಸಾಹ ಉಂಟಾಗಿದೆ. ಹಾಗಾದರೆ, ಚಿಣಿಯವರ ಮುಂದಿನ ನಡೆ ಏನು..? ಯಾವ ಪಕ್ಷ ಸೇರ್ಪಡೆಯಾಗಲಿದ್ದಾರೆ..? ಅಥವಾ ಯಾರಿಗಾದರೂ ಬಾಹ್ಯವಾಗಿ ಬೆಂಬಲ ನೀಡಲಿದ್ದಾರಾ ಎಂಬ ಪ್ರಶ್ನೆಗಳು ಕೇಳಲಾರಂಭಿಸಿವೆ. ಕಾಂಗ್ರೆಸ್ ಪಕ್ಷಕ್ಕೆ ನಿವೃತ್ತ ಅಧಿಕಾರಿ ಪ್ರಭಾಕರ ಚಿಣಿ ಅವರು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದು ಯಾವ ರಾಷ್ಟ್ರೀಯ ಪಕ್ಷ ಅಥವಾ ಪ್ರಾದೇಶಿಕ ಪಕ್ಷಗಳಿಗೆ “ಚಿಣಿ” ಹೊಡೆತ ಬೀಳಲಿದೆ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿರುವುದಂತು ಸತ್ಯ..!?