ಇಸ್ಪೀಟ್ ಜೂಜಾಟ : 8 ಜನ ಅಂದರ್..!

 

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದ ಮಸೀದಿವೊಂದರಲ್ಲಿ ಜೂಜಾಟದಲ್ಲಿ ತೊಡಗಿದ್ದ ಎಂಟು ಜನರನ್ನು ಬಂಧಿಸುವಲ್ಲಿ ಹನುಮಸಾಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ..!

ಇಸ್ಪೀಟ್ ಸಾಮಾಗ್ರಿಗಳು ಸೇರಿದಂತೆ 10,750=00 ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಿ.ಎಸ್. ಐ ಸುನೀಲ್ ಪತ್ರಿಕೆಗೆ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಭಾಗಿಯಾದ ಸುನೀಲ್, ಸಿದ್ರಾಮಪ್ಪ, ಪ್ರಶಾಂತ, ರವಿ ನಡುವಿನಮನಿ ಹಾಗೂ ಕುಂಬಾರ ಸಿಬ್ಬಂದಿ ವರ್ಗವನ್ನು ಅಭಿನಂದಿಸಿದ್ದಾರೆ..!!