ಶಿವಯೋಗಮಂದಿರದ 113 ನೇ ಜಾತ್ರಾ ಮಹೋತ್ಸವ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

(ಕೊಪ್ಪಳ) ಬಾಗಲಕೋಟೆ : ಬಾದಾಮಿ ತಾಲೂಕಿನ ಶಿವಯೋಗಮಂದಿರದಲ್ಲಿ 113 ನೇ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ..!

ಶ್ರೀಮದ್ವೀರಶೈವ ಶಿವಯೋಗಮಂದಿರ ಸಂಸ್ಥೆಯ ಸಂಸ್ಥಾಪಕ, ಯುಗಪುರುಷ ಹಾನಗಲ್ ಶ್ರೀ ಕುಮಾರ ಶಿವಯೋಗಿಗಳವರ 93 ನೇ ಪುಣ್ಯಸ್ಮರಣೋತ್ಸವ ನಿಮಿತ್ಯ
18-02-2023 ರಂದು ಶನಿವಾರ ಮಹಾಶಿವರಾತ್ರಿಯಂದು ಜಾಗರಣೆ ಹಾಗೂ ಸಂಗೀತ ಶಿವಕೀರ್ತನೆ ಸಮ್ಮೇಳನ ಜರಗುವುದು. ಅಲ್ಲದೆ, 08-02-2023 ರಿಂದ ಜರುಗಿ ಬಂದಿರುವ ಬಿದರಿಯ ಶ್ರೀ ಕುಮಾರೇಶ್ವರ ಪುರಾಣವು ಮಹಾಮಂಗಲವಾಗುವುದು.

ದಿನಾಂಕ 19-02-2023 ರಂದು ರವಿವಾರ ಸಾಯಂಕಾಲ 5-30 ಕ್ಕೆ ಏಷ್ಯಾ ಖಂಡದಲ್ಲೇ ಅತ್ಯಂತ ಎತ್ತರದ ಶ್ರೀ ಕುಮಾರೇಶ್ವರ ಮಹಾರಥೋತ್ಸವ ಜರಗುವುದು..!!