ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಹೈದರಾಬಾದ್ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗದ ಪತ್ರಕರ್ತರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಕೊಡಮಾಡುವ ಪ್ರಶಸ್ತಿ ಪಟ್ಟಿಯಲ್ಲಿ ತೆರೆಮರೆಯಲ್ಲಿ ಆಗಿರುವ ಅನ್ಯಾಯವನ್ನು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಯ ತಮ್ಮ ನಿವಾಸ ಮುಂಭಾಗದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿ ಬಳಿಕ ಪತ್ರಕರ್ತರ ಎದುರೇ.. ಸತ್ಯ ಒಪ್ಪಿಕೊಂಡಿದ್ದು ವಿಶೇಷ..!
ಅನ್ಯಾಯ ಖಂಡಿಸಿ ಹುಬ್ಬಳ್ಳಿ ಹಿರಿಯ ಪತ್ರಕರ್ತರಿಂದ ಸಿಎಂಗೆ ಮನವಿ
ಮಾಧ್ಯಮ ಅಕಾಡೆಮಿಯಿಂದ ಈಗಾಗಲೇ ಪ್ರಕಟಿಸಿದ ಪ್ರಶಸ್ತಿ ಪಟ್ಟಿಯಲ್ಲಿದ್ದವರ ಬಗ್ಗೆ ಯಾವುದೇ ತರಹದ ಅಸಮಧಾನ ಇಲ್ಲವೆಂದು ಸಲ್ಲಿಸಿದ ಪತ್ರಕರ್ತರ ಮನವಿ ಪತ್ರ ಸ್ವೀಕರಿಸಿ, ಈಗಾಗಲೇ ನನಗೆ ಸಂಶಯ ವ್ಯಕ್ತವಾಗಿತ್ತು. ಆದಾಗ್ಯೂ ನನಗೆ ತಾವು ಸಲ್ಲಿಸಿದ ಮನವಿ ಪತ್ರದ ಬಗ್ಗೆ ಅರಿವು ಆಗಿದೆ. ಉತ್ತರ ಕರ್ನಾಟಕ ಭಾಗದ ಪತ್ರಕರ್ತರಿಗೆ ಅನ್ಯಾಯವಾಗಿರುವುದು ಸ್ಪಷ್ಟವಾಗಿದೆ. ಈ ಕುರಿತು ತಮ್ಮಿಂದ ಬೇಡಿಕೆ ಕೂಗು ಕೇಳಿ ಬರಲಿಲ್ಲವೆಂದು ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯವ್ಯಕ್ತಪಡಿಸಿದ್ದು ಕೇಳಿ ಬಂದಿದೆ. ಅಲ್ಲದೆ, ಕೂಡಲೇ ಸಮಸ್ಯೆಗಳನ್ನು ಸರಿಪಡಿಸುವ ಭರವಸೆ ಕೂಡಾ ನೀಡಿದ್ದಾರೆ. ಹಿರಿಯ ಪತ್ರಕರ್ತರಾದ ವಿಜಯ ಹೂಗಾರ, ಸಂಗಮೇಶ ಮೆಣಸಿನಕಾಯಿ, ಶಿವಾನಂದ ಗೊಂಬಿ, ಕಾಶಪ್ಪ ಕರದಿನ, ಅರುಣಕುಮಾರ್ ಹುರಳಿಮಠ, ಶಿವರಾಮ ಅಸುಂಡಿ, ಗುರುರಾಜ ಹೂಗಾರ, ಮಹೇಂದ್ರ ಚವ್ಹಾಣ್, ಶಿವಕುಮಾರ ಪತ್ತಾರ, ಈರಣ್ಣ ವಾಯ್.ಡಬ್ಲು ಸೇರಿದಂತೆ ಪತ್ರಕರ್ತ ಮಿತ್ರರು ಉಪಸ್ಥಿತರಿದ್ದರು..!!
